ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿನ್ನೆ ನಗರದಲ್ಲಿ ಬಂಧಿಸಲಾಗಿರುವ ಶಂಕಿತ ಉಗ್ರರು ಹಲವು ಬಾರಿ ಬಾಂಬ್ ತಯಾರಿಸಿ ತುಂಗಾ ನದಿಗೆ ಎಸೆದು ಟ್ರಯಲ್ ಬ್ಲಾಸ್ಟ್ ನಡೆಸುತ್ತಿದ್ದರು ಎಂದು ಹೇಳಲಾಗಿದ್ದು, ಗುರುಪುರದಲ್ಲಿ ಸ್ಪೋಟಕ್ಕೂ ಸಹ ಸಂಚು ರೂಪಿಸಿದ್ದರು ಎನ್ನಲಾಗಿದೆ.
ಉಗ್ರಗಾಮಿ ಚಟುವಟಿಕೆ ಹಾಗೂ ಐಸಿಸಿ ಲಿಂಕ್ ಹಿನ್ನೆಲೆಯಲ್ಲಿ ನಿನ್ನೆ ಪೊಲೀಸರು ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದು, ಪ್ರಮುಖ ಆರೋಪಿಗಾಗಿ ಬಲೆ ಬೀಸಲಾಗಿದೆ.

ಬಂಧಿತ ಯಾಸಿನ್’ನನ್ನು ಆತನ ಮನೆಗೆ ಕರೆತಂದು ಮಹಜರು ನಡೆಸಲಾಗಿದ್ದು, ಟ್ರಯಲ್ ಬ್ಲಾಸ್ಟ್ ನಡೆಸಿದ ಪ್ರದೇಶವಾದ ಸಿದ್ಧೇಶ್ವರ ನಗರ ಹಾಗೂ ಗುರುಪುರದ ಹಿಂಭಾಗದ ನದಿ ಪ್ರದೇಶದಲ್ಲಿ ಮಹಜರು ನಡೆಸಲಾಗಿದೆ.

ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮೂವರು ಡಿವೈಎಸ್’ಪಿಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ಒಟ್ಟು 52 ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಎಲ್ಲ ಆಯಾಮಗಳಲ್ಲೂ ಸಹ ತನಿಖೆ ನಡೆದಿದೆ.











Discussion about this post