ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂದು ಶಿವಮೊಗ್ಗದ ಜಿಲ್ಲಾಡಳಿತ ಕಚೇರಿಯಲ್ಲಿ ಸಚಿವ ಮಧು ಬಂಗಾರಪ್ಪನವರ #Minister Madhu Bangarappa ನೇತೃತ್ವದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಸಭೆಯಲ್ಲಿ ಪ್ರಮುಖವಾಗಿ ಶಾಹೀ ಗಾರ್ಮೆಂಟ್ಸ್, ಸಿಎಸ್ ಷಡಾಕ್ಷರಿ ಅವರ ಮನೆ ಮೇಲೆ ದಾಳಿ, ಅಬ್ಬಲಗೆರೆ ಕೆರೆಯ ಅಕ್ರಮ ಮಣ್ಣು ತೆಗೆತ, ಸೊರಬದಲ್ಲಿ ವಿದ್ಯುತ್ ಇಲಾಖೆಯ ಕಾಮಗಾರಿ ಹಾಗೂ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಮತ್ತು ಫ್ರೀಡಂ ಪಾರ್ಕ್ ಅಭಿವೃದ್ಧಿ ಬಗ್ಗೆ ಚರ್ಚಿಸಿದರು.
ಶಾಹೀ ಗಾರ್ಮೆಂಟ್ಸ್ ಪರಿಸರ ಹಾನಿ ಮಾಡಿ ಜಿಲ್ಲಾಡಳಿತದ ಸೂಚನೆಯನ್ನ ನಿರ್ಲಕ್ಷಿಸುತ್ತಿದ್ದಾರೆ. ಅವರೇನು ಮೇಲಿಂದ ಇಳಿದು ಬಂದಿದ್ದಾರಾ? 250 ಎಕರೆ ಜಮೀನು ಹೇಗೆ ಗಾರ್ಮೆಂಟ್ಸ್ ಗೆ ಹೋಯಿತು? ಅವರಿಗೆ ಬೇಕಾಗಿದ್ದು 10 ಎಕರೆ ಅಷ್ಟೇ, ಹೆಚ್ಚುವರಿ ಸಮೀನು ನೀಡಿದ್ದೇಕೆ. ಕೈಗಾರಿಕಾ ಸಬ್ಸಿಡಿ ಹಣದಲ್ಲೇ ಅವರು ಜಮೀನು ಪಡೆದುಕೊಂಡು ಬಿಟ್ಟಿದ್ದಾರೆ. ಕಾರ್ಖಾನೆಯಲ್ಲಿ 15 ಸಾವಿರ ಜನ ಕೆಲಸ ಮಾಡುತ್ತಿದ್ದಾರೆ. ಆಗಂತ ಅವರ ಕಾರ್ಖಾನೆಯಿಂದ ಸುತ್ತಮುತ್ತಲಿನ ನಾಗರೀಕರಿಗೆ ತೊಂದರೆಯಾಗಬಾರದು. ಪರಿಸರ ಹಾಳಾಗಬಾರದು. ಇಲಾಖೆ ಏನು ಕ್ರಮ ಕೈಗೊಂಡಿದೆ? ತಪ್ಪು ಮಾಡಿದ್ದರೆ ಕ್ರಮ ತೆಗೆದುಕೊಳ್ಳಿ, ಸೀಜ್ ಮಾಡಿ ಎಂದರು.
ಸೀಜ್ ಮಾಡಿ ಎಂದರೆ ಖಡಕ್ ತಪಾಸಣೆ ಮಾಡಿ ಎಂದು, ಅಲ್ಲಿ ಬೇರೆ 15 ಸಾವಿರ ಜನ ಕೆಲಸ ಮಾಡುವುದರಿಂದ ಕಾರ್ಖಾನೆ ಬಂದ್ ಮಾಡಬೇಡಿ ಸೀರಿಯಸ್ ಆಗಿ ಕ್ರಮ ಜರುಗಿಸಿ. ರೈತರು ಜಮೀನನ್ನ ಒತ್ತುವರಿ ಮಾಡಿದರೆ ಸುಮ್ಮನಿರ್ತೀರಾ ಎಂದು ಗರಂ ಆದರು. ಅವರು ಮಾಡುತ್ತಿರುವ ಪರಿಸರ ಹಾನಿ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಇದಕ್ಕೂ ಗರಂ ಆದ ಸಚಿವರು ವರದಿ ಬಂದಿದೆ. ಇಲಾಖೆ ಕಣ್ಣು ಮುಚ್ಚಿಕೊಂಡಿದೆಯಾ? ಎಂದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ನಾನು ಅಧಿಕಾರಿಯಾಗಿ ಬಂದು 6 ತಿಂಗಳಾಗಿದೆ ಎಂದು ಸಮ್ಜಾಯಿಷಿ ಕೊಡಲು ಮುಂದಾದರು. ಇದಕ್ಕೂ ಗರಂ ಆದ ಸಚಿವರು ನಾನು ಸಚಿವನಾಗಿ ಬಂದು ಇಂದಿಗೆ, ಒಂದುವರೆ ವರ್ಷ ಆಗಿದೆ ನಾನು ಸಂಬಂಧವಿಲ್ಲವೆಂದು ಕೈತೊಳೆದುಕೊಳ್ಳಬಹುದಾ? ಮೊದಲು ಕ್ರಮ ಜರುಗಿಸಿ ಎಂದು ಗರಂ ಅದರು.
Also read: ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಶಿಸ್ತು ಕ್ರಮಕ್ಕೆ ಬಿಜೆಪಿ ನಿಷ್ಠರ ಬಣ ಒತ್ತಾಯ
ಅಬ್ಬಲಗೆರೆ ಕೆರೆಯ ಮಣ್ಣನ್ನ ಅಕ್ರಮವಾಗಿ ತೆಗೆದಿದ್ದಾರೆ. ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ ಷಡಾಕ್ಷರಿಯವರು ಹೇಳಿದ್ದಾರೆ ಎಂದ ಮಾತ್ರಕ್ಕೆ ಕ್ರಮ ಕೈಗೊಳ್ಳದಿದ್ದರೆ ಕಷ್ಟವಾಗುತ್ತದೆ. ಸಿಎಂ ಗಮನಿಸುತ್ತಿದ್ದಾರೆ, ಕ್ರಮ ಕೈಗೊಳ್ಳಬೇಕು. ಅವರು ವಾಸವಿರುವ ಮನೆ ಪಿಡಬ್ಲೂಡಿಯಿಂದ ಕೊಡಲಾಗಿದೆ. ಅವರು ಜೆಡ್ ಪ್ಲಸ್ ಮಾದರಿಯಲ್ಲಿ ಕ್ವಾಟ್ರಸ್ ಮನೆಯನ್ನ ಕಟ್ಟಿಸಿಕೊಂಡಿದ್ದಾರೆ ಬೇರೆಯವರಿಗೂ ಹಾಗೆ ಅವಕಾಶ ಕೊಡ್ತೀರಾ ಎಂದ ಸಚಿವರು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.
ಮನೆ ನಿರ್ಮಾಣಕ್ಕೆ ಭ್ರಷ್ಟಾಚಾರದ ಹಣ ಬಳಕೆ ಆಗಿದೆ ಎಂಬ ಮಾಹಿತಿ ನನಗೆ ಇದೆ. ಪಿಡಬ್ಲೂಡಿ ಮನೆಗೆ 17 ಲಕ್ಷ ಖರ್ಚಾಗಿದೆ ಎಂದು ಪಿಡಬ್ಲೂಡಿ ತಿಳಿಸಿದೆ. ಆದರೆ ಎರಡು ಕೋಟಿಯಲ್ಲಿ ಮನೆ ಕಟ್ಟಲಾಗಿದೆ. ಮನೆ ರೈಡ್ ಮಾಡಿ, ಪರಿಶೀಲನೆ ನಡೆಸಿ ಎಂದು ಸಚಿವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಎಸ್ಪಿ ಕಚೇರಿ ಹಿಂಭಾಗದಲ್ಲಿ ಹೊಸ ಜಿಲ್ಲಾಡಳಿತ ಭವನ ಆರಂಭಿಸಲು ಆದಷ್ಟು ಬೇಗ ಕ್ರಮ ಕೈಗೊಳ್ಳಲು ಸಚಿವರು ಸೂಚನೆ ನೀಡಿದರು. ಅಲ್ಲಿ 10 ಎಕರೆ ಜಾಗ ಕಾಯ್ದಿರಿಸಲಾಗಿದೆ. ಈ ಬಜೆಟ್‍ನಲ್ಲಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಹೊಸ ಜಿಲ್ಲಾಡಳಿತ ಭವನದಲ್ಲಿ ಎಲ್ಲಾ ಇಲಾಖೆ ಅಲ್ಲೇ ಬರಲಿದೆ. ಅದಕ್ಕೆ ತಗಲುವ ವೆಚ್ಚ ತಿಳಿಸಲು ಡಿಸಿಗೆ ಸಚಿವರು ತಿಳಿಸಿದರು. ಪಿಡಬ್ಲೂಡಿ ಯಿಂದ ಅರ್ಕಿಟೆಕ್ಟ್ ಮುಂದಿನ ವಾರ ಬರಲಿದ್ದಾರೆ. 10 ದಿನಗಳಲ್ಲಿ ಅನುದಾನ ಎಷ್ಟು ಬೇಕು ಎಂಬುದು ತಿಳಿಯಲಿದೆ ಎಂದು ಡಿಸಿ ತಿಳಿಸಿದರು.
ಸೋಗಾನೆಯಲ್ಲಿ ಫುಡ್ ಪಾರ್ಕ್ ನಿರ್ಮಾಣ ವಿಚಾರದಲ್ಲಿ ಅಧಿಕಾರಿಗಳು ಮಾತನಾಡಿ, 47 ಲಕ್ಷ ರೂ ಅನುದಾನ ದೊರೆತಿದೆ. ನಬಾರ್ಡ್ ನಿಂದ ಡಿಪಿಆರ್ ಮಾಡಲಿದ್ದಾರೆ. ಯಾವಾಗ ಬೇಕಾದರೂ ಹಣ ಬಿಡುಗಡೆಯಾಗಬಹುದು. ಅದನ್ನು ಫಾಲೋಅಪ್ ಮಾಡಿ ಎಂದರು.
ಫುಡ್‍ಪಾರ್ಕ್ ಗೆ ಸಿಎಂ ಅನೌನ್ಸ್ ಮಾಡಿದ ಮೇಲೆ ಯಾಕೆ ತಡವೆಂದು ಸಚಿವರು ಕಳವಳ ವ್ಯಕ್ತಪಡಿಸಿದರು. ಇದಕ್ಕೆ ಹಣ ಇಟ್ಟಿರಲಿಲ್ಲ. ಇಲಾಖೆಯಿಂದ ಹಣ ಬಿಡುಗಡೆ ಮಾಡಿಕೊಳ್ಳಲು ನಿಮ್ಮ ಜವಬ್ದಾರಿ ಇಲ್ವಾ ಎಂದು ಅಧಿಕಾರಿಗಳನ್ನ ಕ್ಲಾಸ್ ತೆಗೆದುಕೊಂಡ ಸಚಿವರು, ತಡಮಾಡಬಾಡಿ ಹಣ ಕರ್ಚಾಗದಿದ್ದರೆ ಮತ್ತೆ ಹಣ ಬಿಡುಗಡೆ ಆಗೊಲ್ಲವೆಂದರು.
ನೈಟ್ ಲ್ಯಾಂಡಿಂಗ್ ಆರಂಭ : ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ #Shivamogga Airport ನೈಟ್ ಲ್ಯಾಂಡಿಂಗ್ ಇಲ್ಲವಾದ ಕಾರಣ ವಿಮಾನಗಳ ಹಾರಾಟಕ್ಕೆ ತೊಂದರೆ ಉಂಟಾಗಿತ್ತು. ಇದಕ್ಕೆ ಇಂದು ನಡೆದ ಸಭೆಯಲ್ಲಿ ಜನವರಿಯಲ್ಲಿ ನೈಟ್ ಲ್ಯಾಂಡಿಂಗ್ ಕಾಮಗಾರಿ ಆರಂಭವಾಗಲಿದೆ. ಇದಕ್ಕೆ ಹಣ ಇಡಲಾಗುತ್ತಿದೆ. 660 ಕೋಟಿ ರೂ. ಹಣ ಕುಡಿಯುವ ನೀರು ಯೋಜಬೆಯನ್ನ ಶಿರಾಳಕೊಪ್ಪ, ಆನವಟ್ಟಿ ಮತ್ತು ಸೊರಬಕ್ಕೆ ಹಣ ಇಡಲಾಗುತ್ತಿದೆ. ಚಂದ್ರಗುತ್ತಿ ದೇಗುಲದ ಅಭಿವೃದ್ಧಿಗೆ ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಸಿಕ್ತಾ ಇದೆ. ಶೀಘ್ರದಲ್ಲಿಯೇ ಅಭಿವೃದ್ಧಿ ಪಡಿಸಲಾಗುವುದು. ಇದೊಂದು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಲಿದೆ ಎಂದರು.
ಅಲ್ಲಮಪ್ರಭು ಹುಟ್ಟಿದ ಸ್ಥಳ ಮತ್ತು ಪಾರ್ಕ್ ಅಭಿವೃದ್ಧಿಗೆ ಪ್ರಸ್ತಾವನೆ ಕಳುಹಿಸಲು ಸೂಚನೆ ನೀಡಿದ ಸಚಿವರು. ಶಿವಮೊಗ್ಗದ ಅಲ್ಲಮ ಪ್ರಭು ಪ್ರೀಡಂ ಪಾರ್ಕ್ ಅಭಿವೃದ್ಧಿಗೆ ಮತ್ತು ಬಳ್ಳಿಗಾವಿಯಲ್ಲಿ ಅಲ್ಲಮಪ್ರಭು ಹುಟ್ಟಿದ ಸ್ಥಳದ ಅಭಿವೃದ್ಧಿಗೆ ಹಣದ ಅನುದಾನಕ್ಕೆ ಜನವರಿ ಒಳಗೆ ಪ್ರಸ್ತಾವನೆ ಕಳುಹಿಸಲು ಸೂಚಿಸಿದರು. ಅಲ್ಲಮಪ್ರಭು ಮೊಟ್ಟಮೊದಲ ಸಂಸತ್ ಅಧ್ಯಕ್ಷರು ಆಗಿದ್ದರು. ಹಾಗಾಗಿ ಅದನ್ನು ಅದ್ಭುತವಾಗಿ ನಿರ್ಮಾಣ ಮಾಡಬೇಕು. ಫ್ರೀಡಂಪಾರ್ಕ್ ಗೆ 5 ಕೋಟಿ ಹಣ ಬಿಡುಗಡೆಯಾಗಿದೆ ಇನ್ನೂ ಹೆಚ್ಚಿನ ಪ್ಲಾನ್ ಸಿದ್ದಪಡಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಸಿಇಓ ಹೇಮಂತ್‍ಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‍ಕುಮಾರ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post