ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪ್ರತಿಷ್ಠತಿ ಜೈನ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳು ಅದ್ದೂರಿಯಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಿದರು.
ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ಶಿಕ್ಷಕರ ವೇಷ ಧಾರಣೆ, ನಾಟಕ, ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆದವು. ಈ ಮೂಲಕ ಅವರು ಶಿಕ್ಷಕರಿಗೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಪಾತ್ರವನ್ನು ನಿರ್ವಹಿಸುವ ಮೂಲಕ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.ವಿಶೇಷವಾಗಿ ನಾಟಕ ಹಾಗೂ ಹಾಸ್ಯಭರಿತ ಪ್ರಹಸನಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಈ ಸಂದರ್ಭದಲ್ಲಿ ಡ್ರೈವರ್ ಮತ್ತು ಅಟೆಂಡರ್’ಗಳಿಗೆ ವಿಶೇಷವಾದ ಕಾಣಿಕೆಗಳನ್ನು ನೀಡುವುದರ ಮೂಲಕ ಗೌರವಿಸಲಾಯಿತು ಹಾಗೂ ಅವರಿಗೆ ಆಟಗಳನ್ನು ಆಡಿಸುವುದರ ಮೂಲಕ ರಂಜಿಸಲಾಯಿತು.
ವಿದ್ಯಾರ್ಥಿಗಳು ಶಿಕ್ಷಕರಿಗೆ ನೆನಪಿನ ಉಡುಗೊರೆಗಳನ್ನು ನೀಡಿ ತಮ್ಮ ಪ್ರೀತಿಯನ್ನು ಹಂಚಿಕೊಂಡರು. ಶಿಕ್ಷಕರು ಮಕ್ಕಳ ಕೃತಜ್ಞತೆಯಿಂದ ಸಂತೋಷಗೊಂಡು ಕಾರ್ಯಕ್ರಮವನ್ನು ತುಂಬಾ ಆನಂದಿಸಿದರು.
ಶಾಲಾ ಪ್ರಾಂಶುಪಾಲರು ಮಾತನಾಡಿ, ಶಿಕ್ಷಕರ ಸೇವೆಯೇ ಶ್ರೇಷ್ಠ ಸೇವೆ. ಮಕ್ಕಳು ತೋರಿದ ಕೃತಜ್ಞತೆ ನಮಗೆ ಪ್ರೇರಣೆ ನೀಡುತ್ತದೆ ಎಂದು ಹೇಳಿದರು.
ಪ್ರಾಂಶುಪಾಲರು ಎಲ್ಲಾ, ಶಿಕ್ಷಕರು, ಆಡಳಿತ ಮಂಡಳಿ, ಶಿಕ್ಷಕೇತರ ವರ್ಗ ಹಾಗೂ ವಿದ್ಯಾರ್ಥಿಗಳಿಗೆ ಧನ್ಯವಾದ ಸಲ್ಲಿಸಿದರು.
ಜೈನ್ ಪಬ್ಲಿಕ್ ಶಾಲೆಯ ಈ ಕಾರ್ಯಕ್ರಮವು ಅತ್ಯಂತ ಶಿಸ್ತಿನಿಂದ ಮತ್ತು ಭಾವಪೂರ್ಣವಾಗಿ ನಡೆಯಿತು. ಇದು ವಿದ್ಯಾರ್ಥಿಗಳಿಗೆ ಶಿಕ್ಷಕರ ಕುರಿತ ಸೇವಾಭಾವವನ್ನು ಬೆಳೆಸುವ ಪ್ರಮುಖ ವೇದಿಕೆಯಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post