ಶಿಕ್ಷಣದಲ್ಲಿ ಗುರುಗಳ ಪಾತ್ರ ಅತಿ ಮುಖ್ಯ. ತಂದೆ ತಾಯಿ ಮತ್ತು ಗುರುಗಳಿಗೆ ವಿಶೇಷ ಗೌರವ ನೀಡಬೇಕು ಮತ್ತು ನಿಮ್ಮ ನಡವಳಿಕೆಯನ್ನು ಶಿಷ್ಯ ಸಮೂಹ ಗಮನಿಸಿತ್ತಿರುತ್ತದೆ. ನಿಮ್ಮನ್ನು ಅನುಕರಣೆ ಮಾಡುತ್ತಿರುತ್ತಾರೆ. ಆದ್ದರಿಂದ ಶಿಕ್ಷಕರು ಉತ್ತಮ ನಡವಳಿಕೆಯನ್ನು ರೂಢಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ DC Selvamani ಹೇಳಿದ್ದಾರೆ.
ಅವರು ಇಂದು ನಗರದ ಜಿಲ್ಲಾ ಒಕ್ಕಲಿಗರ ಸಂಘದ ಭವನದಲ್ಲಿ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದಿಂದ ಹಮ್ಮಿಕೊಂಡಿದ್ದ ಸುಗ್ಗಿ-ಸಂಭ್ರಮ ಮತ್ತು ದೀಪದಾನ ಕಾರ್ಯಕ್ರಮ-2024 ಉದ್ಘಾಟಿಸಿ ಮಾತನಾಡಿದರು.
ಬಿಎಡ್ ವಿದ್ಯಾರ್ಥಿಗಳು 2ನೇ ವರ್ಷದ ಬೀಳ್ಕೊಡುಗೆ ಸಮಾರಂಭವನ್ನು ಸುಗ್ಗಿ ಸಂಭ್ರಮದ ಮೂಲಕ ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಯ ದ್ಯೋತಕದ ರೂಪದಲ್ಲಿ ಹಮ್ಮಿಕೊಂಡು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ವಿಭಿನ್ನವಾಗಿವೆ ಗಮನಸೆಳೆದಿದ್ದೀರಿ. ಬಿ.ಎಡ್., ವಿದ್ಯಾರ್ಥಿಗಳು ಮುಂದೆ ಶಿಕ್ಷಕರಾಗಿ ಸಾಮಾಜಿಕ ಕಾರ್ಯಗಳಲ್ಲಿ ಉತ್ತಮ ಕೊಡುಗೆ ಸಲ್ಲಿಸುವ ವಿದ್ಯಾರ್ಥಿಗಳನ್ನು ತಯಾರು ಮಾಡುವವರು, ಅವರು ಸದಾ ಕ್ರೀಯಾಶೀಲರಾಗಿರಬೇಕು. ಹೊಸತನ್ನು ಕಲಿತು ತಮ್ಮ ಬದುಕಿನಲ್ಲಿ ರೂಢಿಸಿಕೊಳ್ಳುವುದರ ಜೊತೆಗೆ ತಮ್ಮ ವಿದ್ಯಾರ್ಥಿಗಳಿಗೂ ಭೋಧಿಸಬೇಕು . ಹಿಂದೆ ಬ್ಲ್ಯಾಕ್ ಬೋರ್ಡ್ ಮತ್ತು ಡೆಸ್ಕ್ ಸೀಮಿತವಾಗಿ ಶಿಕ್ಷಕರು ಹೇಳಿದ್ದನ್ನೇ ಅಂತಿಮ ಎಂದು ವಿದ್ಯಾರ್ಥಿಗಳು ಭಾವಿಸುತ್ತಿದ್ದರು. ಆದರೆ, ಈಗ ಆನ್‌ಲೈನ್ ಪ್ರಂಪಚ ಯೂಟ್ಯೂಬ್ ಮತ್ತು ಫೆಸ್ ಬುಕ್‌ಗಳಲ್ಲಿ ಹೆಚ್ಚಿನ ಮಾಹಿತಿಗಳು ಲಭ್ಯವಿರುವ ಈ ಕಾಲದಲ್ಲಿ ಆಧುನಿಕತೆಗೆ ತಕ್ಕಹಾಗೆ ವಿವಿಧ ವಿಷಯಗಳನ್ನು ಶಿಕ್ಷಕರು ತಿಳಿದುಕೊಳ್ಳಬೇಕಾಗುತ್ತದೆ. ಇತ್ತೀಚಿನ ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯ ಕೊರತೆ ಇದೆ. ಆ ಏಕಾಗ್ರತೆಯನ್ನು ಗಳಿಸಿಕೊಳ್ಳುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು, ಅವರ ಚಟುವಟಿಕೆ ಮತ್ತು ಬೋಧನ ರೀತಿಯ ಮೇಲೆ ವಿದ್ಯಾರ್ಥಿಗಳ ಭವಿಷ್ಯ ಅವಲಂಭಿತವಾಗಿದೆ. ಶಿಕ್ಷಣದ ಜೊತೆಗೆ ವಿವಿಧ ಕೌಶಲ್ಯಗಳಿಗೂ ಒತ್ತು ನೀಡಬೇಕು. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಮುಂದಿನ ನಿಮ್ಮ ಶಿಕ್ಷಕ ವೃತ್ತಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸುವಂತೆ ಸಾಧನೆ ಮಾಡಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಹೆಚ್.ಬಿ.ಆದಿಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕವಿತಾ ಸುಧೀಂದ್ರ, ಸರಿಗಮಪ ಖ್ಯಾತಿಯ ವಿಶಾಖ್ ನಗಲಾಪುರ್, ಪ್ರಾಂಶುಪಾಲ ಡಾ. ಮಧು, ಒಕ್ಕಲಿಗರ ಸಂಘದ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಮತ್ತು ನಿರ್ದೇಶಕರು ಉಪಸ್ಥಿತರಿದ್ದರು. ವಿದ್ಯಾಲಯದ ಆವರಣದಲ್ಲಿ ಗಾಳಿಪಟಗಳು, ಡೊಳ್ಳು, ರಂಗೋಲಿ, ಛಾಯಾಚಿತ್ರಗಳು ಹಾಗೂ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆತೊಡುಗೆಗಳನ್ನು ತೊಟ್ಟು ಸಂಭ್ರಮಿಸಿದರು.
Discussion about this post