ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದ ಆವರಣದೊಳಗೆ ಗಾಂಜಾ, ಮೊಬೈಲ್ ಫೋನ್ ಮತ್ತು ಸಿಗರೇಟ್’ಗಳನ್ನು #Marijuana, mobile phones and cigarettes ಎಸೆದಿದ್ದ ತಂಡವನ್ನು ತುಂಗಾನಗರ ಪೊಲೀಸರು ಯಶಸ್ವಿಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಯಾರೋ ತೋರಿಸಿದ ದುಡ್ಡಿನಾಸೆಗೆ ಇದೀಗ ಅಮಾಯಕರು ಜೈಲು ಕಂಬಿ ಎಣಿಸುವಂತಾಗಿದೆ.
ಯಾರೋ ತೋರಿಸಿದ 500 ರೂ ದುಡ್ಡಿನಾಸೆಗೆ ಅಮಾಯಕ ಯುವಕರು ಇದೀಗ ಜೈಲು ಕಂಬಿ ಎಣಿಸುವಂತಾಗಿದೆ.
ಫೆ. 1ರಂದು ಬೆಳಗಿನ ಜಾವ ಶಿವಮೊಗ್ಗದ ಸೋಗಾನೆಯ ಕೇಂದ್ರ ಕಾರಾಗೃಹದ ಗೋಡೆಯ ಹೊರಭಾಗದಿಂದ ಯಾರೋ ವ್ಯಕ್ತಿಗಳು ಕಪ್ಪು ಬಣ್ಣದ ಗಮ್ ಟೇಪ್’ನಿಂದ ಪ್ಯಾಕ್ ಮಾಡಿದ್ದ ಗಾಂಜಾ, ಮೊಬೈಲ್, ಲೈಟರ್ ಹಾಗೂ ಸಿಗರೇಟ್’ಗಳನ್ನು ಒಳಗಡೆ ಎಸೆದಿದ್ದರು. ಇದನ್ನು ಗಮನಿಸಿದ್ದ ಜೈಲಿನ ಸಿಬ್ಬಂದಿ ಕೂಡಲೇ ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಈ ಕುರಿತು ಜೈಲು ಅಧೀಕ್ಷಕ ಎಚ್.ಎ. ಪರಮೇಶ್ ಅವರು ನೀಡಿದ ದೂರಿನ ಮೇರೆಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿದ್ದ ಇನ್‌ಸ್ಪೆಕ್ಟರ್ ಕೆ.ಟಿ. ಗುರುರಾಜ್ ಮತ್ತು ತಂಡ ತನಿಖೆ ನಡೆಸಿ ಫೆ. 7ರಂದು ನಾಲ್ವರು ಆರೋಪಿಗಳಾದ ಖಲಂದರ್, ಮುನ್ನ, ವಿಜಯ್, ಪರಶುರಾಮ್ ಬಂಧಿಸಿ ಜೈಲಿಗಟ್ಟಿದ್ದಾರೆ.
ಇನ್ನು, ಆರೋಪಿ ಕಲಂದರ್ ಶಿವಮೊಗ್ಗ ಜೈಲಿನಲ್ಲೇ ಇದ್ದು, ಈತನಿಗೆ ಸರಬರಾಜಾಗುವಂತೆ ಅತಿ ಎತ್ತರವಾಗಿ ಜೈಲಿನ ಕಾಂಪೌಂಡ್ ಇದ್ದರೂ ಕೂಡ ಅದರ ಮೇಲಿನಿಂದ ಎಸೆಯಲು ಕಲಂದರ್ ಸಹಚರರು. ಈ ಆರೋಪಿಗಳಿಗೆ ತಿಳಿಸಿದ್ದರಂತೆ. ನಿಮಗೆ 500 ರೂ. ದುಡ್ಡು ಕೊಡ್ತೀವಿ. ಜೈಲಿನ ಕಾಂಪೌಂಡ್ ಮೇಲಿನಿಂದ ಎಸೆಯಿರಿ ಅಂತಾ ಆಮೀಷ ಒಡ್ಡಿದ್ದರಂತೆ. ಹೀಗಾಗಿ ದುಡ್ಡಿನ ಆಸೆಗೆ ಹಿಂದೆ ಬಿದ್ದು, ಈ ಯುವಕರು ಆ ಪೊಟ್ಟಣದೊಳಗೆ ಏನಿದೆ ಅಂತಲೂ ನೋಡದೇ ಎಸೆದಿದ್ದಾರೆ.
ಘಟನೆ ಬಳಿಕ ಸಿಸಿಟಿವಿ ಪರಿಶೀಲನೆ ವೇಳೆ ಕಪ್ಪು ಬಣ್ಣದ ಕವರ್ ಬಗ್ಗೆ ಗೊತ್ತಾಗಿದ್ದು, ಜೈಲು ಅಧಿಕಾರಿಗಳು, ತುಂಗಾನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಆರೋಪಿಗಳ ಜಾಡು ಹಿಡಿದ ಪೊಲೀಸರು, ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ಹಾಗೂ ಜೈಲಿಗೆ ಎಸೆದಿದ್ದ ಮೊಬೈಲ್ ಫೋನ್, ಗಾಂಜಾ ಹಾಗೂ ಸಿಗರೇಟ್ ಪ್ಯಾಕೆಟ್’ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂವರು ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಆರೋಪಿಗಾಗಿ ಶೋಧ ಮುಂದುವರೆದಿದೆ.
ಸದಾ ಕಾಲ ಜೈಲಿನ ಮೇಲೆ ಹದ್ದಿನ ಕಣ್ಣಿಟ್ಟಿರುವ ಕೆಎಸ್’ಐಎಸ್’ಎಫ್ ಪೊಲೀಸರು ಹಾಗೂ ಶಿವಮೊಗ್ಗ ಪೊಲೀಸರ ಕಾರ್ಯಾಚರಣೆಯಿಂದಾಗಿ ಆರೋಪಿಗಳು ಜೈಲಿನಲ್ಲಿ ಮುದ್ದೆ ಮುರಿಯುವಂತಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















