ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂದು ವಿಧಾನಸೌಧದಲ್ಲಿ ದಿ ಆಶ್ರಮ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ #Minister Madhu Bangarappa ಅವರು ಸಂವಾದ ನಡೆಸಿದರು.
ಶಿಕ್ಷಣ ಕ್ಷೇತ್ರದ ಸುಧಾರಣೆಗಳ ಕುರಿತು, ವಿಶೇಷವಾಗಿ ಮೂರು ಪರೀಕ್ಷೆಗಳ ನೀತಿಯ ಬಗ್ಗೆ, ಹಲವು ಶೈಕ್ಷಣಿಕ ವಿಚಾರಗಳನ್ನು ಹಂಚಿಕೊಂಡರು.
ವಿದ್ಯಾರ್ಥಿಗಳ ಕುತೂಹಲ, ಜ್ಞಾನಾಸಕ್ತಿ ಮತ್ತು ಶಿಕ್ಷಣದ ಭವಿಷ್ಯದ ಕುರಿತ ಅವರ ಚಿಂತನೆಗಳನ್ನು ನೋಡಿ ಸಚಿವರು ಅಪಾರ ಸಂತೋಷ ವ್ಯಕ್ತಪಡಿಸಿದರು.
ಶಿಕ್ಷಣತಜ್ಞರಾಗಿದ್ದ ಹಾಗು ಡೆಕ್ಕನ್ ಹೆರಾಲ್ಡ್ #Deccan Herald ಮತ್ತು ಪ್ರಜಾವಾಣಿ ಪತ್ರಿಕೆಗಳ #Prajavani Paper ಸ್ಥಾಪಕ ಕೆ. ಎನ್. ಗುರುಸ್ವಾಮಿ ಅವರು ಸ್ಥಾಪಿಸಿದ ದಿ ಆಶ್ರಮ ಶಾಲೆ, #The Ashrama School ನಿಜಕ್ಕೂ ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿದೆ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಲು ಹಾಗೂ ಶಿಕ್ಷಣ ಕ್ಷೇತ್ರದ ಪ್ರಗತಿಯಲ್ಲಿ ತಾವು ಸಹಭಾಗಿಗಳಾಗುವಂತೆ ಅವರನ್ನು ಪ್ರೋತ್ಸಾಹಿಸಲು ಅವಕಾಶ ದೊರಕಿದ ಕಾರಣ ತಮಗೆ ಬಹಳ ಸಂತೋಷವಾಯಿತೆಂದು ಸಚಿವರು ಹರ್ಷ ವ್ಯಕ್ತಪಡಿಸಿದರು. ಶಾಲೆಯ ಮಕ್ಕಳು ತಮ್ಮ ಶಿಕ್ಷಕರೊಂದಿಗೆ ವಿಧಾನಸಭೆಯ ಪ್ರಸ್ತುತ ನಡೆಯುತ್ತಿರುವ ಅಧಿವೇಶನವನ್ನು ವೀಕ್ಷಿಸಲು ಆಗಮಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post