ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಷ್ಟ್ರೀಯತೆ ಮತ್ತು ಹಿಂದುತ್ವದ ಹಿನ್ನಲೆಯಲ್ಲಿ ನೈರುತ್ಯ ಪದವೀಧರ ಕೇತ್ರದಿಂದ #Southwestern Graduate Constituency ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಘುಪತಿ ಭಟ್ #Raghupathi Bhat ಗೆದ್ದೇ ಗೆಲ್ಲುತ್ತಾರೆ ಎಂದು ರಾಷ್ಟ್ರಭಕ್ತರ ಬಳಗದ ಪ್ರಮುಖ ಶ್ರೀಕಾಂತ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಘುಪತಿ ಭಟ್ ಅವರಿಗೆ ಟಿಕೆಟ್ ನೀಡುತ್ತೇವೆ ಎಂದ ಬಿಜೆಪಿ ಕೊನೆಗೆ ಕೈಕೊಟ್ಟಿದೆ. ಸಂಘ ಪರಿವಾರದವರನ್ನು ಹಿಂದುತ್ವ ವಾದಿಗಳನ್ನು ಬಿಜೆಪಿ ಪಕ್ಷ ಕಡೆಗಾಣಿಸುತ್ತಿದೆ. ಇದಕ್ಕೆ ಕೆ.ಎಸ್. ಈಶ್ವರಪ್ಪನವರು #K S Eshwarappa ಕೂಡ ಸಾಕ್ಷಿಯಾಗಿದ್ದಾರೆ. ಈಗ ಸಮಾನ ಮನಸ್ಕರಾದ ಇಬ್ಬರು ಬಿಜೆಪಿಯನ್ನು ಶುದ್ಧೀಕರಣಗೊಳಿಸುವ ಹಿನ್ನಲೆಯಲ್ಲಿ ಲೋಕಸಭೆಯಂತೆಯೇ ವಿಧಾನ ಪರಿಷತ್ ಚುನಾವಣೆಯಲ್ಲಿ ಕೂಡ ರಾಷ್ಟ್ರೀಯತೆ ಹಿಂದುತ್ವವನ್ನೇ ಮುಖ್ಯವಾಗಿಟ್ಟುಕೊಂಡು ಚುನಾವಣೆಗೆ ಸ್ಪರ್ಧೆ ಮಾಡಲಾಗಿದೆ ಎಂದರು.

Also read: ಸಾಮಾನ್ಯರಂತೆ ಕೋರ್ಟ್ ಹೊರಗೆ ಕುಳಿತು ಜಾಮೀನು ಪಡೆದ ಸಿಎಂ ಸಿದ್ದು, ಡಿಸಿಎಂ ಡಿಕೆಶಿ | ಯಾವ ಪ್ರಕರಣ?
ಶಿವಮೊಗ್ಗ ನಗರವೊಂದರಲ್ಲಿಯೇ ಸುಮಾರು 10 ಸಾವಿರ ಪದವೀಧರ ಮತದಾರರಿದ್ದಾರೆ. ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರು ಈಗಾಗಲೇ ಮನೆ ಮನಗೆ ತಲುಪಿ ಮತಯಾಚಿಸುತ್ತಿದ್ದಾರೆ. ಅವರ ವಿಚಾರಧಾರೆಗಳು ಪ್ರತಿಯೊಬ್ಬ ಮತದಾರನಿಗೂ ಇಷ್ಟವಾಗಿವೆ. ಸಂಘ ಪರಿವಾರದವರು ಬಿಜೆಪಿ ಕಾರ್ಯಕರ್ತರು ಕೂಡ ರಘುಪತಿ ಭಟ್ ಅವರಿಗೆ ಬೆಂಬಲ ನೀಡುತ್ತಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಗನ್ನಿ ಶಂಕರ್, ಸುವರ್ಣಾ ಶಂಕರ್, ಬಾಲು, ಸೋಗಾನೆ ರಮೇಶ್, ಶಂಕರ್, ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post