Read -   2 minutes
                                
                        ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  |
ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ವೈಯುಕ್ತಿಕ ದತ್ತಾಂಶಗಳು ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು ಭದ್ರತೆಯುಳ್ಳ ನಿರ್ವಹಣೆಯೇ ನಮ್ಮ ಮುಂದಿರುವ ಸವಾಲು ಎಂದು ಭಾರತ ಸರ್ಕಾರದ ರಾಷ್ಟ್ರೀಯ ಅಂಕಿಅಂಶ ಆಯೋಗದ ಅಧ್ಯಕ್ಷರಾದ ಡಾ.ಬಿಮಲ್ ರಾಯ್ ಅಭಿಪ್ರಾಯಪಟ್ಟರು.ಇಂದು ನಗರದ ಜೆ.ಎನ್.ಎನ್. ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗ, ಕೊಲ್ಕೊತ್ತ ಕ್ರಿಪ್ಟಾಲಜಿ ರಿಸರ್ಚ್ ಸೊಸೈಟಿ ಆಫ್ ಇಂಡಿಯಾ, ಜೆ.ಎನ್.ಎನ್.ಸಿ ಐಇಇಇ ಮತ್ತು ಐಇಟಿಇ ಶಿವಮೊಗ್ಗ ವತಿಯಿಂದ ಏರ್ಪಡಿಸಿದ್ದ ಕ್ರಿಪ್ಟೊಲಜಿ ಕುರಿತ ಮೂರು ದಿನಗಳ ಅಂತರಾಷ್ಟ್ರೀಯ ಕಾರ್ಯಾಗಾರವನ್ನು ಆನ್ಲೈನ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ತಂತ್ರಜ್ಞಾನದ ವೇದಿಕೆಗಳ ಮೂಲಕ ಮುಕ್ತವಾಗಿ ದತ್ತಾಂಶಗಳನ್ನು ಪ್ರಸಾರಗೊಳಿಸಬೇಕೆಂಬ ಯೋಚನೆಗಳಿದ್ದರೂ ಯಾವುದೇ ರೀತಿಯ ವೈಯುಕ್ತಿಕ ವಿಚಾರಗಳಿಗೆ ತೊಂದರೆಯಾಗದಂತೆ ನಿರ್ವಹಿಸಬೇಕಾದ ಸವಾಲುಗಳನ್ನು ಎದುರಿಸುತ್ತಿದೆ. ಈ ಹಿನ್ನಲೆಯಲ್ಲಿ ಕ್ರಿಪ್ಟೊಗ್ರಫಿ ಪ್ರಮುಖ ಪಾತ್ರ ವಹಿಸಲಿದ್ದು ಎನ್ಕ್ರಿಪ್ಟ್ ಮತ್ತು ಡಿಕ್ರಿಪ್ಟ್‌ಗಳ ಕುರಿತು ನಮ್ಮ ಸಂಶೋಧನಾರ್ಥಿಗಳು ಹೆಚ್ಚಿನ ಸಂಶೋಧನೆಗಳು ಕೈಗೊಳ್ಳಲಿ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಎ.ಎಸ್. ವಿಶ್ವನಾಥ ಮಾತನಾಡಿ ಕ್ರಿಪ್ಟೊಗ್ರಫಿ ಆಧುನಿಕ ಗೂಡಚಾರ್ಯವಿದ್ದಂತೆ. ಬಿಟ್‌ಕಾಯಿನ್ ನಂತಹ ಹಲವು ಪ್ರಕರಣಗಳು ಇಂದು ಚರ್ಚೆಯಾಗುತ್ತಿರುವುದು ಸೋಜಿಗದ ವಿಷಯ. ತಂತ್ರಜ್ಞಾನದಲ್ಲಿ ಹಲವು ಬದಲಾವಣೆಗಳಾಗುತ್ತಿದರು ಕೂಡ ಸೂಕ್ತ ಭದ್ರತೆಯ ಕೊರತೆ ಎದುರಿಸುತ್ತಿದೆ. ಎನ್ಕ್ರಿಪ್‌ಷನ್ ಮತ್ತು ಡಿಕ್ರಿಪ್‌ಷನ್ ಮೂಲಕ ಉಪಯೋಗ ಮತ್ತು ಅಪಾಯಕಾರಿ ಎರಡನ್ನು ಒಳಗೊಂಡಿದ್ದು ಉತ್ತಮ ಕಾರ್ಯಗಳಿಗೆ ಸಮರ್ಪಕ ಬಳಕೆ ಮಾಡಿಕೊಳ್ಳಬೇಕಾದ ಜವಾಬ್ದಾರಿ ಯುವ ಸಮೂಹದ ಮೇಲಿದೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್. ನಾಗರಾಜ ಮಾತನಾಡಿ ಜೂಲಿಯಸ್ ಸೀಸರ್ ತನ್ನ ಸೇನಾಧಿಕಾರಿಗಳಿಗೆ ಪರ್ಫೇಕ್ಟ್ ಸ್ಕ್ವೇರ್ ಎಂಬ ಗೂಡ ಲಿಪಿಯ ಸೂತ್ರದ ಆಧಾರದ ಮೇಲೆ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಪ್ರಾಯಶಃ ಕ್ರಿಪ್ಟೊಲಜಿ ಎಂಬ ಅಂಶ ಇಲ್ಲಿಂದಲೇ ಪ್ರಾರಂಭಗೊಂಡಿರಬಹುದು. ಪ್ರಸ್ತುತ ಡಿಜಿಟಲಿಕರಣದ ಮೂಲಕ ಕ್ರಿಪ್ಟೊಗ್ರಫಿ ನಮ್ಮ ಪ್ರತಿಯೊಂದು ಕೆಲಸಗಳಲ್ಲಿ ಸ್ಥಾನ ಪಡೆದಿದೆ. ನಾವು ಬಳಸುವ ವೈಯುಕ್ತಿಕ ಪಾಸ್‌ವರ್ಡಗಳು ಅಲ್ಲಿ ಬಳಕೆಯಾದ ತಾಂತ್ರಿಕ ಕೀಲಿಗಳು ನಮ್ಮ ದತ್ತಾಂಶಗಳಿಗೆ ಭದ್ರತೆ ನೀಡುವಲ್ಲಿ ಸಹಕಾರಿಯಾಗಿದೆ. ಪ್ರತಿಯೊಂದು ಆವಿಷ್ಕಾರಗಳ ಮೂಲ ತಳಹದಿ ಗಣಿತಶಾಸ್ತ್ರವಾಗಿದ್ದು ವಿದ್ಯಾರ್ಥಿಗಳು ತಳಹದಿಯಿಂದ ಆಧುನಿಕ ಆವಿಷ್ಕಾರಗಳ ಹಲವು ವಿಷಯಗಳ ಕುರಿತಾಗಿ ಅಧ್ಯಯನ ನಡೆಸಲು ಇಂತಹ ಕಾರ್ಯಾಗಾರಗಳು ಪೂರಕವಾಗಿ ನಿಲ್ಲಲಿದೆ ಎಂದು ಹೇಳಿದರು.

ಜೆ.ಎನ್.ಎನ್.ಸಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ನಾಗೇಂದ್ರ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಎನ್‌ಇಎಸ್ ನಿರ್ದೇಶಕರಾದ ಹೆಚ್.ಸಿ.ಶಿವಕುಮಾರ್, ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಮಂಜುನಾಥ.ಪಿ, ಇನ್ಫ್ರಾಸ್ಟ್ರಕ್ಚರ್ ಡೀನ್ ಡಾ.ಎಂ.ಎಂ.ರಜತ್ ಹೆಗಡೆ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗ ಮುಖ್ಯಸ್ಥರಾದ ಡಾ.ಎಸ್.ವಿ.ಸತ್ಯನಾರಾಯಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

 Loading ...
 Loading ... 
							
Discussion about this post