ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಾನು ಸಮಾಜವಾದಿ, ಕುವೆಂಪು ಅವರನ್ನೇ ಅನುಕರಿಸುತ್ತೇನೆ ಎನ್ನುವ ಸಿದ್ಧರಾಮಯ್ಯನ್ನು ಮುಸ್ಲಿಮರನ್ನು ಓಲೈಸುತ್ತಾರೆ. ವೈಭವೀಕರಣವನ್ನೇ ವಿರೋಧಿಸುತ್ತೇನೆ ಎನ್ನುವ ಅವರು, 75ಕೋಟಿ ಖರ್ಚು ಮಾಡಿ ಹೇಗೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇಂತಹ ಸಂಭ್ರಮಾಚರಣೆ ಏತಕ್ಕೆ ಸಿದ್ಧರಾಮಯ್ಯ ಸಿದ್ಧರಾಮೋತ್ಸವ ಆಚರಿಸಲು ಮುಂದಾಗುತ್ತಿರುವುದು ಎಷ್ಟು ಸರಿ ಎಂದು ಶಾಸಕ ಈಶ್ವರಪ್ಪ MLA Eshwarappa ಪ್ರಶ್ನಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿನ್ನುದ್ದೇಶಿಸಿ ಮಾತನಾಡಿದ ಅವರು, ಹೆಣ್ಣು ಗೊತ್ತಾಗಿಲ್ಲ, ನಿಶ್ಚಿತಾರ್ಥವಾಗಿಲ್ಲ, ತಾಳಿ ಕಟ್ಟದೇ ಮುಂದುವರೆಯುವ ಯೋಚನೆಯಲ್ಲಿದ್ದಾರೆ. ಮೊನ್ನೆಯವರೆಗೆ ಬದಾಮಿಯಲ್ಲಿ ನಿಲ್ಲುತ್ತೇನೆ ಎಂದು ಹೇಳುತ್ತಿದ್ದ ಸಿದ್ಧರಾಮಯ್ಯ ಈಗಾಗಲೇ ಕೋಲಾರ, ವರ್ಣ ಕ್ಷೇತ್ರದ ಹೆಸರು ಹೇಳುತ್ತಿದ್ದಾರೆ. ಎಲ್ಲಿಂದ ಸ್ಪರ್ಧಿಸಬೇಕು ಎನ್ನುವುದೇ ಗೊತ್ತಿಲ್ಲದೇ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ಸಿದ್ಧರಾಮಯ್ಯ ಮತ್ತು ಡಿಕೆಶಿ ಅವರನ್ನು ಲೇವಡಿ ಮಾಡಿದರು.
ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ Siddaramaiah, D K Shivakumar ಮುಖ್ಯಮಂತ್ರಿಯಾಗುತ್ತೇವೆ ಎಂಬ ಭ್ರಮೆಯಲ್ಲಿದ್ದು, ತಮ್ಮ ತಮ್ಮ ವೈಯಕ್ತಿಕ ವರ್ಚಸ್ಸನ್ನು ಸಾಭೀತು ಮಾಡಲು ಮುಂದಾಗುತ್ತಿರುವುದು ಶೋಚನೀಯ ಸಂಗತಿ. ಜನರೇ ನೀವು ಬೇಡ ಎಂದು ನಿಮ್ಮನ್ನು ತಿರಸ್ಕರಿಸಿದ್ದಾರೆ. ಎಲ್ಲಾ ಚುನಾವಣೆಗಳಲ್ಲೂ ಸೋತು ಸುಣ್ಣವಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲೂ ಕೇವಲ ಒಂದು ಸ್ಥಾನ ಗಳಿಸಿದ್ದಾರೆ. ಅವರು ಸ್ಪರ್ಧಿಸುವುದೇ ಮುಸ್ಲಿಮರು ಹೆಚ್ಚಿರುವ ಕ್ಷೇತ್ರದಿಂದ ಎಂದು ತಾನು ಖಚಿತವಾಗಿ ಹೇಳುತ್ತೇನೆ. ರಾಹುಲ್ ಗಾಂಧಿ ಕೇರಳದ ವಯನಾಡುಗೆ ವಲಸೆ ಬಂದಂತೆ ಇವರು ಚಾಮರಾಜಪೇಟೆಯ ಜಮೀರ್ ಅಹಮದ್ ಅವರ ಕಾಲಿಗೆ ಬೀಳುವುದು ನಿಶ್ಚಿತ ಎಂದು ಕುಹಕವಾಡಿದರು.
Also read: ಆನೆ ಹಂತಕರ ರಕ್ಷಣೆಗೆ ನಿಂತರೇ ಸಂಸದ ಪ್ರಜ್ವಲ್ ರೇವಣ್ಣ? ಸಿಎಂಗೆ ಮನೇಕಾ ಗಾಂಧಿ ಪತ್ರ ಬರೆದಿದ್ದೇಕೆ?
ಹಿಂದೂಗಳಿಗೆ ಅವರು ಮಾಡಿರುವ ದ್ರೋಹದಿಂದ ಹಿಂದೂಗಳೂ ಹೆಚ್ಚಾಗಿ ಇರುವ ಕ್ಷೇತ್ರದಿಂದ ಸ್ಪರ್ಧಿಸಿದರೆ ಕಾಂಗ್ರೆಸ್‌ಗೆ ಮುಖಭಂಗ ಖಚಿತ ಎಂಬ ಅರಿವು ಅವರಿಗಿರುವ ಕಾರಣ ಇನ್ನೂ ಸ್ಥಳ ಸಮೀಕ್ಷೆಯಲ್ಲಿ ನಿರತರಾಗಿದ್ದಾರೆ. ಸಿದ್ಧರಾಮೋತ್ಸವ ನಂತರ ಕಾಂಗ್ರೆಸ್‌ನವರ ನಾಟಕ ಇನ್ನು ಏನೇನು ನಡೆಯುತ್ತದೆಯೋ ಕಾದು ನೋಡಬೇಕು. ನಾಚಿಕೆ ಬಿಟ್ಟು ಪ್ರತಿದಿನ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ವ್ಯಂಗ್ಯವಾಡಿದರು.
ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಒಮ್ಮತ ಮೇರೆಗೆ ಜಿಎಸ್‌ಟಿ ಹೆಚ್ಚಳ ಮಾಡಲಾಗಿದೆ. ರಾಜ್ಯದಲ್ಲಿ ಮಾತ್ರ ಅದರ ಬಗ್ಗೆ ಟೀಕೆ ಮಾಡುವ ಸಿದ್ಧರಾಮಯ್ಯ ರಾಜಸ್ಥಾನ, ಜಾರ್ಖಂಡ್‌ನಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಮುಖ್ಯಮಂತ್ರಿಗಳಿಗೆ ರಾಜೀನಾಮೆಗೆ ಆಗ್ರಹಿಸಲಿ ಎಂದು ಒತ್ತಾಯಿಸಿದರು.
ಸಿದ್ಧರಾಮೋತ್ಸವ ಸಿದ್ಧರಾಮಯ್ಯನವರ ಕೊನೆಯ ನಾಟಕ. ಮುಂಬರುವ ಚುನಾವಣೆಯೊಳಗೆ ಇದಕ್ಕೆ ಪರದೆ ಬೀಳಲಿದೆ. ಸಿದ್ಧರಾಮೋಹತ್ಸವದಂತೆ ಉಳಿದ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಡಿ.ಕೆ. ಶಿವಕುಮಾರ್ ಅವರಿಗೂ ಉತ್ಸವ ಆಚರಿಸಲಿ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post