ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಪ್ರಕೃತಿ ಸೌಂದರ್ಯದ ನೆಲವೀಡಾದ ಮಲೆನಾಡಿನಲ್ಲಿ ಪ್ರಯಾಣ ಮಾಡುವುದು, ಅದರಲ್ಲೂ ಮಳೆಗಾಲದಲ್ಲಿ ಪ್ರಯಾಣ ಮಾಡುವುದು ಎಂದರೆ ಅದು ಸ್ವರ್ಗಕ್ಕೆ ಮೂರೇ ಗೇಣು ಎಂಬಂತಹ ಸಂತಸದ ವಿಚಾರ.
ಇಂತಹ ಮಲೆನಾಡಿನ ಮಳೆಯನ್ನು ಚಲಿಸುತ್ತಿದ್ದ ಕಾರಿನಲ್ಲಿ ವೀಡಿಯೋ ಮಾಡಿಕೊಂಡೇ ಸಂಭ್ರಮಿಸುತ್ತಿದ್ದ ವೇಳೆ ಎದುರಿನಿಂದ ಬಂದ ಲಾರಿ ಅಪ್ಪಳಿಸಿದೆ.
ಇಂತಹ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಶಿವಮೊಗ್ಗ ಬಳಿಯ ಸಕ್ರೆಬೈಲಿನ ಹತ್ತಿರ ನಡೆದ ಅಪಘಾತ.
ಮಲೆನಾಡಿನ ಸುಂದರ ಮಳೆಯನ್ನು ಚಲಿಸುತ್ತಿದ್ದ ಕಾರಿನಿಂದಲೇ ವೀಡಿಯೋ ಮಾಡುತ್ತಿರುತ್ತಾರೆ. ಎದುರಿಗೆ ಒಂದು ಲಾರಿ ವೇಗವಾಗಿ ಬರುತ್ತದೆ. ಇನ್ನೇನು ಆ ಲಾರಿ ಪಾಸ್ ಆಯಿತು ಎನ್ನುವ ವೇಳೆಗೆ ಲಾರಿಯ ಹಿಂಬದಿ ಬಂದು ಕಾರಿಗೆ ಅಪ್ಪಳಿಸಿದೆ.
ಭಾರೀ ಮಳೆ ಸುರಿಯುತ್ತಿದ್ದ ಕಾರಣ ಲಾರಿ ನಿಯಂತ್ರಣಕ್ಕೆ ಸಿಗದೇ ಮೊದಲು ಬೈಕ್’ಗೆ ಡಿಕ್ಕಿ ಹೊಡೆದು ಆನಂತರ ಕಾರಿಗೆ ಡಿಕ್ಕಿ ಹೊಡೆದಿದೆ.
ಬೈಕ್ ಸವಾರರಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬ ತೀವ್ರವಾಗಿ ಗಾಯಗೊಂಡಿದ್ದಾನೆ ಎಂದು ವರದಿಯಾಗಿದೆ.
ತೀರ್ಥಹಳ್ಳಿ ಕಡೆಯಿಂದ ಬರುತ್ತಿದ್ದ ಅಪಘಾತಕ್ಕಿಡಾದ ಕಾರಿನಲ್ಲಿದ್ದವರಿಗೆ ಸಣ್ಣಪಟ್ಟ ಗಾಯಗಳಾಗಿವೆ.
Get in Touch With Us info@kalpa.news Whatsapp: 9481252093







Discussion about this post