ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲೆನಾಡಿನಲ್ಲಿ ನಿರಂತರ ಸುರಿಯುತ್ತಿರುವ ಮಳೆಯ ಪರಿಣಾಮ ಸೊರಬದ ಚಂದ್ರಗುತ್ತಿ ಬೆಟ್ಟ ಸ್ವರ್ಗದಂತೆ ತೋರುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಪುರಾಣ ಪ್ರಸಿದ್ಧ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದ ಸುತ್ತಮುತ್ತಲಿನ ಹಸಿರು ಹೊದ್ದ ಮನಮೋಹಕ ಪ್ರದೇಶವಾಗಿದೆ.
ಸಾಕಷ್ಟು ಇತಿಹಾಸ ಹೊಂದಿರುವ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಾಲಯದ ಕುರಿತು ಅನೇಕ ಶಾಸನಗಳು ಇತಿಹಾಸವನ್ನು ಸಾರಿ ಹೇಳುತ್ತಿವೆ.ಚಂದ್ರಗುತ್ತಿ ಬೆಟ್ಟ ಸಮುದ್ರ ಮಟ್ಟದಿಂದ 2,800 ಅಡಿ ಎತ್ತರದಲ್ಲಿದೆ. ಅಪಾರ ಅರಣ್ಯ ಸಂಪತ್ತನ್ನು ಹೊಂದಿದ್ದು ಮಳೆಯಿಂದ ಹಸಿರು ಹೊದ್ದು ಚಂದ್ರಗುತ್ತಿ ಬೆಟ್ಟ ಕಂಗೊಳಿಸುತ್ತಿದೆ.
ಶ್ರೀ ರೇಣುಕಾಂಬ ದೇವಿಯು ಮಲೆನಾಡು ಮಾತ್ರವಲ್ಲದೇ ಬಯಲು ಸೀಮೆಯ ಭಾಗದ ಲಕ್ಷಾಂತರ ಭಕ್ತರು ಮನೆ ದೇವತೆಯಾಗಿದ್ದಾಳೆ.
ಬನವಾಸಿಯ ಕದಂಬರು, ವಿಜಯನಗರ ಅರಸರು, ಕೆಳದಿಯ ನಾಯಕರು ಸೇರಿದಂತೆ ಅನೇಕ ರಾಜರು ಆಳಿರುವ ಪ್ರದೇಶವಾಗಿದೆ. ಸದ್ಯ ಮಳೆಯಿಂದಾಗಿ ಹಸಿರಿನಿಂದ ಕಂಗೊಳಿಸುತ್ತಿರುವ ಈ ಬೆಟ್ಟದ ರಮಣೀಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post