ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಿಳಿಸುವ ಹಾಗೂ ಸೌಲಭ್ಯ ಪಡೆಯಲು ಉಚಿತ ಸೇವಾ ಕೇಂದ್ರ ಸ್ಥಾಪಿಸಿರುವ ಎಂ. ರಾಜಶೇಖರ್ ಬಳಗದ ಕಾರ್ಯ ಶ್ಲಾಘನೀಯ ಎಂದು ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಹೇಳಿದರು.
ಅವರು ಎಂ.ರಾಜಶೇಖರ್ ಬಳಗದಿಂದ ಹೊರತಂದಿರುವ ಸರ್ಕಾರ ಸೌಲಭ್ಯಗಳ ಮಾಹಿತಿಯನ್ನು ಒಳಗೊಂಡ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

Also read: ಗ್ರಾಮೀಣ ಹುಡುಗನ ಕನಸು | ಹಳ್ಳಿಯಿಂದ ಡೆಲ್ಲಿವರೆಗಿನ ಪಯಣ | ನಟ ಜಗ್ಗೇಶ್ ನೆನಪಿನ ಬುತ್ತಿ
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ರಾಜಶೇಖರ್ ಮಾತನಾಡುತ್ತಾ, ಬಳಗದ ಸದಸ್ಯರಿಂದ 27ನೇ ವಾರ್ಡ್‌ನ ಅಣ್ಣಾನಗರದ ನಾಗರೀಕರ ಮನೆ ಮನೆಗೆ ತೆರಳಿ ನಮ್ಮ ಬಳಗಕ್ಕೆ ಸದಸ್ಯತ್ವ ನೊಂದಣಿ ಮಾಡುವ ಜೊತೆಗೆ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಸೌಲಭ್ಯದಿಂದ ವಂಚಿತರಾದವರಿಗೆ ಸೌಲಭ್ಯವನ್ನು ತಲುಪಿಸುವ ಹಾಗೂ ಉಚಿತ ಸೇವಾ ಕೇಂದ್ರವನ್ನು ಸ್ಥಾಪಿಸಿದ್ದೇವೆ. ಇದನ್ನು 27ನೇ ವಾರ್ಡ್‌ನ ನಾಗರೀಕರು ಪಡೆದುಕೊಳ್ಳಬೇಕಾಗಿ ಮನವಿ ಮಾಡಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post