ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಜಿಲ್ಲೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೇರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಹಕಾರದಿಂದ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿ ಸಾಕಾರ ಗೊಳ್ಳುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ #MP B Y Raghavendra ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಜನ ಪ್ರತಿನಿಧಿಯಾಗಿ ಜನರಿಗೆ ಉತ್ತರದಾಯಿಯಾಗಿರಬೇಕು. ನನ್ನ ಆಸೆ ಮತ್ತು ಜನರ ಅಪೇಕ್ಷೆಯಂತೆ ಶಿವಮೊಗ್ಗ ಜಿಲ್ಲೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸುವ ನಿಟ್ಟನಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿ ಪಡಿಸಿದರೆ ಜಿಲ್ಲೆ ತನ್ನಿಂದ ತಾನೇ ಅಂತರರಾಷ್ಟ್ರೀಯಮಟ್ಟಕ್ಕೆ ಗುರುತಿಸಲ್ಪಡುತ್ತದೆ. ಅದು ಪ್ರವಾಸೋದ್ಯಮದಲ್ಲಿರಬಹುದು, ಕೈಗಾರಿಕೆಯಲ್ಲಿರಬಹುದು. ರೈಲ್ವೆ, ಏರ್ ಬೇಸ್ ಯೋಜನೆಗಳಿರಬಹುದು. ಶಿವಮೊಗ್ಗ ಜಿಲ್ಲೆಗೆ ಯಾರೆ ಬಂದರೂ ನೆಮ್ಮದಿಯಿಂದ ಇರುವಂತೆ ಅಭಿವೃದ್ದಿ ಮಾಡುವ ಪ್ರಯತ್ನ ನಡೆದಿದೆ ಎಂದರು.

ಮೊದಲೆ ಬಾರಿಗೆ ಚುನಾವಣೆಗೆ ಸ್ಪರ್ಧೆ ಮಾಡಿದಾಗ ಗೆಲುವಿನ ಅಂತರ 52 ಸಾವಿರ ಇತ್ತು, ಈಗ 2.50 ಲಕ್ಷದ ಹತ್ತಿರ ಬಂದಿದೆ. ಇದಕ್ಕೆ ಕಾರಣ ನರೇಂದ್ರ ಮೋದಿ ಕೊಟ್ಟ ಸಹಕಾರದಿಂದ ಆದ ನಮ್ಮ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿ, ಮತ್ತು ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್ ಯಡಿಯೂರಪ್ಪ ಅವರು ಕೊಟ್ಟ ಅಭಿವೃದ್ದಿಕಾರ್ಯ, ಜೆಡಿಎಸ್-ಬಿಜೆಪಿ ಹೊಂದಾಣಿಕೆಯ ಬಲ. ವಿಶೇಷವಾಗಿ ಪಕ್ಷದ ಸಂಘಟನೆ-ಹಾರೈಕೆ ಯಿಂದ ಗೆಲುವ ಸಾಧ್ಯವಾಯಿತು. ಜನರ ಕೊಟ್ಟ ಬೆಂಬಲಕ್ಕೆ ನಾನು ಉತ್ತರದಾಯಿಯಾಗಿದ್ದೇನೆ.
-ಬಿ.ವೈ ರಾಘವೇಂದ್ರ, ಸಂಸದರು

ಅರಸಾಳುನಿಂದ ತೀರ್ಥಹಳ್ಳಿ, ಶೃಂಗೇರಿ-ಚಿಕ್ಕಮಗಳೂರು ಲಿಂಕ್ ಮಾಡಿ ಅಲ್ಲಿಂದ ಹಾಸನಕ್ಕೆ ಮೂಲಕ ಮಂಗಳೂರಿಗೆ ರೈಲ್ವೆ ಸಂಪರ್ಕ ವಿಐಎಸ್‍ಎಲ್ ಈಗ ಡಿಸ್ ಇನ್ವೆಸ್ಟ್ ಮೆಂಟ್ ಸ್ಥಿತಿಯಲ್ಲಿದ್ದರೂ ಸೈಲ್ ನಿಮದ ಹಂತ ಹಂತವಾಗಿ ಬಂಡವಾಳ ಹೂಡಿಕೆ ಮಾಡಿ ಮುನ್ನಡೆಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಕೈಗಾರಿಕಾ ಸಚಿವರಾದ ನಮ್ಮ ರಾಜ್ಯದವರೆ ಆದ ಹೆಚ್.ಡಿ ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಡಿಸೆಂಬರ್ ವೇಳೆಗೆ ಕಾರ್ಖಾನೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಭದ್ರಾವತಿ, ಚನ್ನಗಿರಿ ಮೂಲಕ ಚಿಕ್ಕಜಾಜೂರಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಯೋಜನೆಯೂ ಸಿದ್ದವಾಗುತ್ತಿದೆ ಎಂದರು.

ಸಂಸದ ಬಿ.ವೈ ರಾಘವೇಂದ್ರ ಅವರು ತಮ್ಮ ತಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಅಂಗವಿಕಲರಿಗೆ ತ್ರಿಚಕ್ರ ವಾಹನ ಮತ್ತು ಶ್ರವಣ ಉಪಕರಣಗಳನ್ನು ನೀಡುವ ಮೂಲಕ ತಮ್ಮ ಹುಟ್ಟ ಹಬ್ಬವನ್ನು ಆಚರಿಸಿಕೊಂಡರು.

ಶರಾವತಿ ಪಂಪ್ಟ್ ಸ್ಟೋರೆಜ್ ವಿರೋಧಿಸುತ್ತೇವೆ. ಪರಿಸರ ನಾಶ ಆಗುವುದು ಸರಿಯಲ್ಲ. ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯನ್ನು 388 ಚದುರ ಕಿ.ಮೀ ಕಡಿತಗೊಳಿಸಿ ಪರಿಹರಿಸಲಾಗಿದೆ. ಅರಣ್ಯ ಇಲಾಖೆಯಲ್ಲಿದ್ದ ಕಂದಾಯ ಜಾಗವನ್ನು ಬಿಡಿಸಲಾಗಿದೆ. ಈ ಬಗ್ಗೆ ಹಲವು ವಿರೋಧಗಳು ಕೂಡ ಇವೆ. ಪರಿಸರಕ್ಕೂ ನಾಶವಾಗುತ್ತದೆ. ಉತ್ಪಾದನೆಯ ಖರ್ಚು ಕೂಡ ಹೆಚ್ಚಿದೆ.
ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಮಾಜಿ ಶಾಸಕರಾದ ಎಸ್. ರುದ್ರೇಗೌಡ, ಜೆಡಿಎಸ್‍ನ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಎಸ್. ದತ್ತಾತ್ರಿ, ಟಿ.ಡಿ. ಮೇಘರಾಜ್, ಸಿ.ಹೆಚ್. ಮಾಲತೇಶ್, ಕೆ.ವಿ. ಅಣ್ಣಪ್ಪ, ಕೆ.ಜಿ. ಕುಮಾರಸ್ವಾಮಿ, ಅಶೋಕ್ ನಾಯ್ಕ ಸೇರಿದಂತೆ ಬಿಜೆಪಿ, ಜೆಡಿಎಸ್‍ನ ಪ್ರಮುಖರು ಸೇರಿದಂತೆ ವಿವಿಧ ಸಂಘಟನೆಗಳು ಮುಖಂಡರು ರಾಘವೇಂದ್ರ ಅವರಿಗ ಶುಭಕೋರಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post