ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸರ್ಕಾರ ನಡೆಸುತ್ತಿರುವ ಜಾತಿ ಜನಗಣತಿಯಿಂದ #Caste Census ಲಿಂಗಾಯಿತ ಸಮಾಜಕ್ಕೆ ಬಹುದೊಡ್ಡ ಅನ್ಯಾಯವಾಗಿದೆ. ಮುಖ್ಯಮಂತ್ರ ಸಿದ್ದರಾಮಯ್ಯ #CM Siddaramaiah ಅವರು ಆ ಸಮಾಜದ ಕ್ಷಮೆ ಕೇಳಬೇಕು. ಈಗಾಗಲೇ ಕಾಂಗ್ರೆಸ್ ಪಕ್ಷದ ಹಲವು ಸಚಿವರು ಮತ್ತು ಶಾಸಕರುಗಳು ಜನಗಣತಿಯನ್ನು ಒಪ್ಪಿಲ್ಲ. ಯಾವ ಪೂರ್ವತಯಾರಿಯೂ ಸರ್ಕಾರಕ್ಕಿಲ್ಲ. ಹಾಗಾಗಿ ಜನಗಣತಿ ಎಂಬುದು ಜನರಿಗೆ ಬಹುದೊಡ್ಡ ಹಿಂಸೆಯಾಗಿ ಪರಿಣಮಿಸಿದೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಜನಗಣತಿ ಎಂಬುದು ಹಿಂದೂ ಸಮಾಜವನ್ನೇ ಛಿದ್ರಮಾಡಲು ಹೊರಟಿದೆ. ಜನರಿಗೂ ಹಿಂಸೆ, ಸಮೀಕ್ಷಾದಾರರಿಗೂ ಹಿಂಸೆ. ಸಮೀಕ್ಷಾದಾರರಿಗೆ ನೂರೆಂಟು ಸಂಕಷ್ಟಗಳು ಜನರಿಗೋ ಅರ್ಥವಿಲ್ಲದ ಪ್ರಶ್ನೆಗಳು ಒಟ್ಟಾರೆ ಇದೊಂದು ದೊಡ್ಡ ಹಿಂಸೆಯಾಗಿದೆ. ಜಾತಿಗಳೇ ಛಿದ್ರವಾಗಿವೆ. ಮುಖ್ಯಮಂತ್ರಿಗಳು ಹಠಮಾಡಿ ಈ ಗಣತಿಯನ್ನು ಪ್ರಾರಂಭಿಸಿದ್ದಾರೆ ಎಂದರು.
ಈ ಜನಗಣತಿಯು ಹಳ್ಳ ಸೇರುವುದು ಖಚಿತ. ಈಗಾಗಲೇ ಕಾಂತ್‍ರಾಜ್ ವರದಿ ಮುಳುಗಿಹೋಯಿತು. ಜಾರಿಗೆ ತರಲಿಲ್ಲ 160 ಕೋಟಿ ಹಣ ನೀರು ಪಾಲಾಯಿತು. ಈಗಲೂ ಅಷ್ಟೇ 420 ಕೋಟಿ ರೂ.ಗಳನ್ನು ಇದಕ್ಕಾಗಿ ಖರ್ಚು ಮಾಡುತ್ತಿದ್ದಾರೆ. ಇದೂ ಕೂಡ ಉಪಯೋಗಕ್ಕೆ ಬರುವುದಿಲ್ಲ. ಈ ವರದಿಯೇ ಬಿಡುಗಡೆಯಾಗುವುದಿಲ್ಲ. ಒಟ್ಟಾರೆ ಜನಗಣತಿ ವಿಫಲದಾರಿಯತ್ತ ಸಾಗಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post