ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತ ವಿಶ್ವಗುರು ಎನ್ನುವುದಕ್ಕೆ 45 ದಿನಗಳ ಕಾಲ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ #Prayagraj ತ್ರಿವೇಣಿ ಸಂಗಮದಲ್ಲಿ ನಡೆದ ಕುಂಭಮೇಳವೇ ಸಾಕ್ಷಿಯಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 45 ದಿನಗಳ ಕಾಲ ಪ್ರಯಾಗದಲ್ಲಿ ನಡೆದ ಮಹಾಕುಂಭಮೇಳ #Mahakumbha ಅತ್ಯಂತ ಯಶಸ್ವಿಯಾಗಿದೆ. ಅದರ ಪರಿಣಾಮ ಇಡೀ ದೇಶ ಸಂಭ್ರಮದಿಂದ ಪ್ರಯಾಗದ ಕುಂಭಮೇಳವನ್ನು ವೀಕ್ಷಿಸಿದ್ದಾರೆ. ಸುಮಾರು 64.23 ಕೋಟಿ ಜನ ಪ್ರತ್ಯಕ್ಷವಾಗಿ ಭಾಗವಹಿಸಿದ್ದಾರೆ. ಇದೊಂದು ಅವಿಸ್ಮರಣೀಯ ಕಾರ್ಯ. ಗಂಗಾ ಯಮುನಾ ಸೇರುವಂತಹ ಜಾಗಕ್ಕೆ ಹೋಗುವುದು ಒಂದು ಭಾವನಾತ್ಮಕ ಸಂಗತಿ. ಇದು ಹಿಂದೂ ಸಮಾಜಕ್ಕೆ ದೊಡ್ಡ ಶಕ್ತಿ ಚೈತನ್ಯವನ್ನು ತುಂಬಿರುವಂತಹದ್ದು. ಪ್ರಯಾಗದ ಕುಂಭಮೇಳ ಈ ಒಂದು ವಾತಾವರಣವನ್ನು ಸೃಷ್ಟಿಸಿರುವುದು ನಮ್ಮ ಹೆಮ್ಮೆ ಎಂದರು.
Also Read>> ದೆಹಲಿಯಲ್ಲಿ ಬಿಜೆಪಿ ಸರ್ಕಾರ ಬಂದ ಬೆನ್ನಲ್ಲೇ ರೋಹಿಂಗ್ಯಾ ಮುಸ್ಲಿಮ್ಸ್’ಗೆ ಗೇಟ್ ಪಾಸ್?
ದೇಶ ವಿದೇಶಗಳಿಂದ ಆಗಮಿಸಿದ್ದರು. ಭಾರತ ವಿಶ್ವ ಗುರು #Vishwaguru ಆಗುತ್ತದೆ ಎನ್ನುವುದ್ದಕ್ಕೆ ಅನೇಕ ಜನರು ಹೇಳುತ್ತಾರೆ. ವಿದೇಶಿಗರು ಭಾರತೀಯರು ಎಲ್ಲರೂ ಬಂದಿದ್ದರು. ವಿಶ್ವ ಗುರು ಭಾರತ ಆಗುತ್ತದೆ ಎನ್ನುವುದಕ್ಕೆ ಎರಡು ಮಾತಿಲ್ಲ ಎಂಬ ನಂಬಿಕೆ ಇದೆ. ಲಕ್ಷಾಂತರ ಜನರ ಭಕ್ತಿ ಭಾವನೆಗೆ ಕುಂಭ ಮೇಳ ಸಾಕ್ಷಿಯಾಗಿದೆ. ಇದಕ್ಕೆ ಕಾರಣೀಭೂತರಾದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಮತ್ತು ಅವರ ತಂಡ ವ್ಯವಸ್ಥಿತವಾಗಿ ನಡೆಸಿದ್ದಾರೆ. ನರೇಂದ್ರ ಮೋದಿಯವರ #NarendraModi ಮಾರ್ಗದರ್ಶನದ ಮೂಲಕ ಅವರದೇ ಆದ ಕಾರ್ಯತಂತ್ರದ ಮೂಲಕ ಅಚ್ಚುಕಟ್ಟಾಗಿ ನೆರವೇರಿಸಿದ್ದಾರೆ ಎಂದರು.

ಕೋಟಿಗಟ್ಟಲೆ ಜನ ಸ್ನಾನ ಮಾಡುತ್ತಿದ್ದರೂ ಕೂಡಾ ನೀರು ಅಷ್ಟೊಂದು ತಿಳಿಯಾಗಿತ್ತು. ಅಲ್ಲಿಗೆ ಬಂದಿದ್ದ ಭಕ್ತರು ಹೆಚ್ಚು ಸಂಭ್ರಮದಿಂದ ಆಗಮಿಸಿದ್ದರು. ಜೊತೆಗೆ ಪೋಲಿಸ್ ಸಿಬ್ಬಂದಿಗಳ ಸಹನೆಯನ್ನು ಮೆಚ್ಚಬೇಕು. ಅತ್ಯಂತ ಸಂಯಮದಿಂದ ತಾಳ್ಮೆಯಿಂದ 75 ಸಾವಿರ ಪೋಲಿಸ್ ಸಿಬ್ಬಂದಿಗಳು ಕಾರ್ಯನಿರ್ವಹಿಸಿದ್ದರು. ದೋಣಿಯ ಮೇಲೆ ಕರೆದುಕೊಂಡು ಹೋಗುವ ವ್ಯವಸ್ಥೆಯು ಇತ್ತು. ಒಂದು ಸರ್ಕಾರ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ನೋಡಬೇಕು ಎಂದರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ದತ್ತಿ ನಿಧಿ ಕಾರ್ಯಕ್ರಮದ ಪ್ರಶಸ್ತಿ ಪಡೆದ ಶಿವಮೊಗ್ಗದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post