ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುವೆಂಪು ವಿಶ್ವವಿದ್ಯಾನಿಲಯದ Kuvempu University ಮೂವರು ಎನ್‌ಎಸ್‌ಎಸ್ ಅಧಿಕಾರಿಗಳು ಮತ್ತು ಸ್ವಯಂ ಸೇವಕರು 2021-22ನೇ ಸಾಲಿನ ಎನ್.ಎಸ್.ಎಸ್. ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದು ಇವರಿಗೆ ಕುವೆಂಪು ವಿವಿ ಅಭಿನಂದನೆ ಸಲ್ಲಿಸಿದೆ.
ಅತ್ಯುತ್ತಮ ಘಟಕ : ಡಾ ವೀಣಾ ಎಮ್ ಕೆ, ಪ್ರಾಂಶುಪಾಲರು, ಸಹಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಶಿವಮೊಗ್ಗ, ಅತ್ಯುತ್ತಮ ರಾಸೇಯೋ ಅಧಿಕಾರಿ : ಡಾ ಶುಭಾಮರವಂತೆ, ಸಹಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಶಿವಮೊಗ್ಗ, ಅತ್ಯುತ್ತಮ ಎನ್.ಎಸ್.ಎಸ್. ಸೇವಕ : ಶ್ರೀ ಚೇತನ್ ಟಿ. ಸಿ. ಸ್ನಾತಕೋತ್ತರ ರಸಾಯನ ಶಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾಲಯ. ಶಂಕರಘಟ್ಟ ಇವರು ಬೆಂಗಳೂರಿನ ರಾಜಭವನದ ಬಾಂಕೇಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ Thavarchand Gehlot ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಇವರುಗಳಿಗೆ ಕುವೆಂಪು ವಿಶ್ವವಿದ್ಯಾಲಯದ ವತಿಯಿಂದ ಕುಲಪತಿ ಪ್ರೊ, ವೆಂಕಟೇಶ್, ಕುಲಸಚಿವರಾದ ಸ್ನೇಹಲ್ ಸುಧಾಕರ್ ಲೋಖಂಡೆ ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ ಪರಿಸರ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post