ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಳೆದ ವರ್ಷದಿಂದ ಎಂಆರ್’ಎಸ್ ವೃತ್ತದ ಬಳಿಯಲ್ಲಿ ಧೂಳು ಹಿಡಿಯುತ್ತಿದ್ದ ಯುದ್ಧ ಟ್ಯಾಂಕರ್’ಗೆ #CombatTanker ಕೊನೆಗೂ ಉತ್ತಮ ಸ್ಥಳ ಹಾಗೂ ಪ್ರತಿಷ್ಠಾಪನೆಗೆ ದಿನಾಂಕ ನಿಗದಿಯಾಗಿದೆ.
ಸದ್ಯ ಎಂಆರ್’ಎಸ್ ವೃತ್ತದ ಬಳಿಯಲ್ಲಿ ಇರಿಸಲಾಗಿರುವ ಯುದ್ಧ ಟ್ಯಾಂಕರನ್ನು ಶೀಘ್ರವೇ ಫ್ರೀಡಂ ಪಾರ್ಕ್’ಗೆ #FreedomPark ಸ್ಥಳಾಂತರ ಮಾಡಲಾಗುತ್ತಿದ್ದು, ಅಂದುಕೊಂಡಂತೆ ಆದರೆ ಜನವರಿ 26 ರ ಗಣರಾಜ್ಯೋತ್ಸವದಂದು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ.
Also Read>> ಈ ವಾರ ಶಿವಮೊಗ್ಗ ಜಿಲ್ಲೆಯಲ್ಲಿ ಯಾವೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ? ಇಲ್ಲಿದೆ ಮಾಹಿತಿ
ಯಾವುದು ಈ ಯುದ್ಧ ಟ್ಯಾಂಕರ್?
ರಷ್ಯಾ #Russia ನಿರ್ಮಿಸಿದ್ದ ಈ ಟಿ55 ಮಾದರಿಯ ಯುದ್ಧ ಟ್ಯಾಂಕರ್ ದೇಶದ ಮಹತ್ವ ಯುದ್ದದಲ್ಲಿ ಭಾಗವಹಿಸಿದೆ.
ಪ್ರಮುಖವಾಗಿ ಭಾರತ-ಪಾಕ್-ಬಾಂಗ್ಲಾ ಯುದ್ಧದಲ್ಲಿ ಈ ಟ್ಯಾಂಕರ್ ಬಳಕೆಯಾಗಿತ್ತು. ಆನಂತರದ ದಿನಗಳಲ್ಲಿ ಇದನ್ನು ಸೇನೆಯ ಸೇವೆಯಿಂದ ನಿವೃತ್ತಿಗೊಳಿಸಲಾಗಿತ್ತು.
ದೇಶದ ಹೆಮ್ಮೆಯಾದ ಈ ಯುದ್ದ ಟ್ಯಾಂಕರ್ ನಮ್ಮೂರಿಗೆ ಬರಲಿ ಎಂದು ಸಂಸದ ಬಿ.ವೈ. ರಾಘವೇಂದ್ರ #BYRaghavendra ಅವರು ನಡೆಸಿ ಪ್ರಯತ್ನದ ಫಲವಾಗಿ ಶಿವಮೊಗ್ಗ ನಗರಕ್ಕೆ ಮಂಜೂರು ಮಾಡಲಾಗಿತ್ತು.ಯಾವಾಗ ಶಿವಮೊಗ್ಗಕ್ಕೆ ಬಂತು?
2023 ರ ಆಗಸ್ಟ್ 12 ರಂದು ಮಹಾರಾಷ್ಟ್ರದ #Maharashtra ಪುಣೆಯ ಕಿರ್ಕಿ ಸೇನಾ ಕಂಟೋನ್ಮೆೆಂಟ್ ಬೋರ್ಡ್’ನಿಂದ ಈ ಯುದ್ದ ಟ್ಯಾಂಕರನ್ನು ಶಿವಮೊಗ್ಗ #Shivamogga ನಗರಕ್ಕೆ ತರಲಾಗಿತ್ತು. ಇದಕ್ಕೆ ಭರ್ಜರಿ ಸ್ವಾಗತ ಸಹಕೋರಲಾಗಿತ್ತು.
ಸ್ಥಳ ಬದಲಾವಣೆ ಯಾಕೆ?
ಆರಂಭದಲ್ಲಿ ಈ ಯುದ್ಧ ಟ್ಯಾಂಕರನ್ನು ಎಂಆರ್’ಎಸ್ ವೃತ್ತದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿತ್ತು. ಆದರೆ, ಈ ವೃತ್ತದ ಮೂಲಕ ಮೇಲ್ಸೇತುವೆ #Flyover ಹಾದುಹೋಗುವ ಜೊತೆಯಲ್ಲಿ ಇಲ್ಲಿ ಹೆದ್ದಾರಿ ಕಾಮಗಾರಿಯೂ ಸಹ ನಡೆಯಲಿದೆ. ಹೀಗಾಗಿ, ಆಗಬಹುದಾದ ಅಡ್ಡಿಯನ್ನು ತಪ್ಪಿಸಲು ಬದಲಿ ಸ್ಥಳವನ್ನು ಹುಡುಕಾಗುತ್ತಿತ್ತು.
ಅಂತಿಮವಾಗಿ, ಫ್ರೀಡಂ ಪಾರ್ಕ್’ನಲ್ಲಿ ಸ್ಥಳ ಗುರುತಿಸಲಾಗಿದ್ದು, ಇದರ ಪ್ರತಿಷ್ಠಾಪನೆಗೆ ಅಗತ್ಯವಿರುವ ಕಟ್ಟೆ ಹಾಗೂ ಫೆನ್ಸಿಂಗ್ ಸಹ ನಿರ್ಮಿಸಲಾಗಿದೆ.
ಅಂದುಕೊಂಡಂತೆ ಆದರೆ ಜನವರಿ 26ರಂದು ಇದು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post