ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಅಜೇಯ ಸಂಸ್ಕøತಿ ಬಳಗದ ವತಿಯಿಂದ ಜ. 19ರ ನಾಳೆ ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಕರ್ನಾಟಕ ಸಂಘ ಭವನದಲ್ಲಿ ವಿಶಿಷ್ಟ ಕಾರ್ಯಕ್ರಮ ಒಂದನ್ನು ಹಮ್ಮಿಕೊಳ್ಳಲಾಗಿದೆ.
“ಅಮ್ಮ ಎಂಬ ಅಚ್ಚರಿಗೊಂದು ಅಕ್ಕರೆಯ ನಮನ” ಎಂಬ ಹೆಸರಿನ ಈ ಕಾರ್ಯಕ್ರಮದಲ್ಲಿ ತಾಯಿಯ ಕುರಿತಾದ ಹಲವು ರೀತಿಯ ಅಭಿವ್ಯಕ್ತಿಗಳು ವಿವಿಧ ಗಣ್ಯರಿಂದ ಅನಾವರಣಗೊಳ್ಳಲಿವೆ.
Also read: ಜ.20 ರಿಂದ 29 | ಪುರಂದರದಾಸರ ಆರಾಧನೆ | ಮಲ್ಲೇಶ್ವರ ರಾಯರ ಮಠದಲ್ಲಿ 9 ದಿನ ವೈವಿಧ್ಯಯ ಕಾರ್ಯಕ್ರಮ
ವೀಣಾ ಬನ್ನಂಜೆ, ಜಗದೀಶ ಶರ್ಮ ಸಂಪ, ವಸುಧೇಂದ್ರ, ಜಿ.ಎಸ್. ನಟೇಶ್, ಸಹನಾ ಚೇತನ್, ವಿಘ್ನೇಶ್ ಭಟ್ ಮೊದಲಾಗಿ ಅನೇಕ ವಿದ್ವಾಂಸರು ಅಮ್ಮನ ಕುರಿತಾದ ತಮ್ಮ ಚಿಂತನೆಗಳನ್ನು ವಿವಿಧ ಆಯಾಮಗಳಲ್ಲಿ ಪ್ರಸ್ತುತ ಪಡಿಸಲಿದ್ದಾರೆ.
ಇಡೀ ದಿನ, ಊಟ ತಿಂಡಿ ಪಾನೀಯ ಆದಿಯಾಗಿ ಎಲ್ಲವನ್ನೂ ಒಳಗೊಂಡು ನಡೆಯುವ ಈ ಕಾರ್ಯಕ್ರಮದಲ್ಲಿ ಕಿರು ಉಪನ್ಯಾಸ, ಕಥಾ ವಾಚನ, ಕಿರುಚಿತ್ರ, ಗಮಕ, ಸಂಗೀತ, ನೃತ್ಯ ಮೊದಲಾಗಿ ಹಲವು ಪ್ರಕಾರಗಳ ಮೂಲಕ ಅಮ್ಮನನ್ನು ಕಾಣಿಸುವ ವಿಶೇಷ ಪ್ರಯತ್ನ ಮಾಡಲಾಗಿದೆ.
ಕೇವಲ ಕೆಲವೇ ಜನರು ಪಾಲ್ಗೊಳ್ಳಲು ಅವಕಾಶವಿರುವ ಈ ಕಾರ್ಯಕ್ರಮಕ್ಕೆ ಆಗಮಿಸಲು ಬಯಸುವವರು ಫೆÇೀನ್ ನಂಬರ್ 98441 53534 ಅಥವಾ 83108 76277 ಇವುಗಳನ್ನು ಸಂಪರ್ಕಿಸಿ ಕೂಡಲೇ ಹೆಸರು ನೊಂದಾಯಿಸಬೇಕಾಗಿ ಬಳಗ ವಿನಂತಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post