ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮನುಷ್ಯನ ಜೀವನದಲ್ಲಿ ಪ್ರತಿನಿತ್ಯ ಹೆದರಿಕೆ ಎಂಬುದು ಸ್ವಾಭಾವಿಕ ಅದೇ ಕಾರಣಕ್ಕಾಗಿ ನಾವು ಅನೇಕ ಬಾರಿ ನಮ್ಮ ಗುರಿಯನ್ನು ತಲುಪುವುದಿಲ್ಲ ಧೈರ್ಯವಿದ್ದರೆ ಆತ್ಮವಿಶ್ವಾಸವಿದ್ದರೆ ಎಲ್ಲಿಯೂ ತೊಡಕಾಗುವುದಿಲ್ಲ ಎಂದು ವಾಸವಿ ಅಡ್ವೆಂಚರ್ ಕ್ಲಬ್ ನ ಕಾರ್ಯದರ್ಶಿ ಎಸ್ ಕೆ ಶೇಷಾಚಲ ತಿಳಿಸಿದರು
ಅವರು ಇಂದು ನಗರದ ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ, ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತರಣೋದಯ ಘಟಕ ಹಾಗೂ ವಾಸವಿ ಅಡ್ವೆಂಚರ್ ಕ್ಲಬ್ ಶಿವಮೊಗ್ಗ ಇವರ ಸಹಯೋಗದಲ್ಲಿ ನಗರದ ಗುಡ್ಡೆ ಮರಡಿ ಗುಡ್ಡದಲ್ಲಿ ರಾಕ್ ಕ್ಲೈಂಬಿಗ್ ಮಾಡುವ ಸಾಹಸ ಕಾರ್ಯಕ್ರಮವನ್ನು ತಾವೇ ಬಂಡೆ ಇಳಿಯುವ ಮೂಲಕ ಉದ್ಘಾಟಿಸ ಮಾತನಾಡುತ್ತ ಇವತ್ತು ನನ್ನ ಅನುಭವ ಮತ್ತು ನಮ್ಮ ಮಕ್ಕಳ ಅನುಭವ ಇಂತಹ ಸಾಹಸ ಚಟುವಟಿಕೆಗಳು ಮನುಷ್ಯನ ದೈನಂದಿಕ ಜೀವನಕ್ಕೆ ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚು ಮೂಡಿಸುತ್ತದೆ ಎಂದರು.

Also read: ಸೊರಬ | ಅಜ್ಜ ಅಜ್ಜಿಯ ಜೊತೆ ಮಕ್ಕಳು ಬೆಳೆಯುವುದರಿಂದ ಸಮಗ್ರ ಅಭಿವೃದ್ಧಿ: ಸಾವಿತ್ರಮ್ಮ
ಈ ನಿಟ್ಟಿನಲ್ಲಿ ವಾಸವಿ ಪಬ್ಲಿಕ್ ಶಾಲೆ ಈ ಪ್ರಯತ್ನದಲ್ಲಿ ಸದಾ ಮುಂದಿದೆ ಅನೇಕ ಟ್ರಕ್ಕಿಂಗ್ ಗಳು ತುಂಗಾ ನದಿಯಲ್ಲು #Tunga River ಬೋಟ್ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಅಚರಣೆ, ವಿಶೇಷವಾಗಿ ಹಿಮಾಲಯ ಚಾರಣ ನಡೆಸಿ ವಿದ್ಯಾರ್ಥಿಗಳಲ್ಲಿ ಸಾಹಸ ಮನೋಭಾವನೆ ಮೂಡಿಸುತ್ತಿದೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post