ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪ್ರತಿಷ್ಠಿತ ಸುಬ್ಬಯ್ಯ ವೈದ್ಯಕೀಯ ಕಾಲೇಜಿನ #Subbaiah Medical College ಇಬ್ಬರು ವಿದ್ಯಾರ್ಥಿಗಳು ಸಿದ್ಧಪಡಿಸಿದ ಸಂಶೋಧನಾ ಪ್ರಬಂಧ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಗೆ #ICMR ಆಯ್ಕೆಯಾಗಿದ್ದು, ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದೆ.
ಕಾಲೇಜಿನ 2ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ರಿತ್ವಿಶಾ ಅವರ “Study Of Trends In Maternal And Umbilical Cord Blood Lead Levels” ಎಂಬ ಸಂಶೋಧನಾತ್ಮಕ ಪ್ರಬಂಧ ಪ್ರಸ್ತಾವನೆ ಐಸಿಎಂಆರ್’ಗೆ ಆಯ್ಕೆಯಾಗಿದೆ.
Also read: ಯುಟಿಐ ಮ್ಯೂಚುವಲ್ ಫಂಡ್ ಕಾರವಾರ ಶಾಖೆ ಆರಂಭ
ರಿತ್ವಿಶಾ ಅವರಿಗೆ ಕಾಲೇಜಿನ ಮಕ್ಕಳ ವಿಭಾಗದ ಡಾ.ವಿಕ್ರಂ ಎಸ್. ಕುಮಾರ್ ಅವರು ಮಾರ್ಗದರ್ಶನ ಮಾಡಿದ್ದರು. ಇನ್ನು, ಮೊದಲನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಮೊಹಮದ್ ಉಮರ್ ಅವರ “A Descriptive Analysis Of Antimicrobial Resistance Pattern In Clinical Coli Isolates At A Tertiary Care Ccntre Over The Last Five Years” ಎಂಬ ಸಂಶೋಧನಾತ್ಮಕ ಪ್ರಬಂಧ ಪ್ರಸ್ತಾವನೆ ಸಹ ಐಸಿಎಂಆರ್’ಗೆ ಆಯ್ಕೆಯಾಗಿದೆ.
ಮೊಹಮದ್ ಅವರಿಗೆ ಕಾಲೇಜಿನ ಡಾ. ಸುಶೀಲಾ ಸೋಮಪ್ಪ ಹಳೇಮನಿ ಅವರು ಮಾರ್ಗದರ್ಶನ ಮಾಡಿದ್ದರು. ಕಾಲೇಜಿನ ಇಬ್ಬರು ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ವೈದ್ಯರು ಹಾಗೂ ವೈದ್ಯಕೀಯೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post