ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಲಭಾದೆ ತಾಳಲಾರದೆ ಕುಟುಂಬ ನಿರ್ವಹಣೆಗೆ ಹೆದರಿ ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಶಿವಮೊಗ್ಗದ ಮಿಳಘಟ್ಟ ಮೊದಲನೇ ತಿರುವಿನ ಪರಂದಯ್ಯ(70), ದಾನಮ್ಮ (60) ಮತ್ತು ಮಂಜುನಾಥ್(25) ಮೃತ ದುರ್ದೈವಿಗಳಾಗಿದ್ದು, ಮನೆಯಲ್ಲಿ ವಿಷ ಸೇವಿಸಿ ಸಾವನ್ನಪ್ಪಿದ್ದಾರೆ.
ಘಟನೆ ಹಿನ್ನೆಲೆ:
ದಾನಮ್ಮ- ಪರಂದಯ್ಯ ಅವರಿಗೆ ಮಕ್ಕಳಿಲ್ಲದ ಕಾರಣ ಅವರು ಕಳೆದ 20 ವರ್ಷಗಳ ಹಿಂದೆ ಒಂದು ಗಂಡು ಮಗುವನ್ನು ದತ್ತು ಪಡೆದುಕೊಂಡಿದ್ದರು. ಪರಂದಯ್ಯ ಕೂಲಿ ಕೆಲಸ ಮಾಡಿಕೊಂಡಿದ್ದು, ದಾನಮ್ಮ ಕಲ್ಲೂರು ಮಂಡ್ಲಿ ಪೇಪರ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋಗುತಿದ್ದರು. ಇತ್ತೀಚೆಗೆ ಮಿಳಗಟ್ಟದಲ್ಲಿ ವಾಸವಾಗಿದ್ದರು.
ಇತ್ತೀಚೆಗೆ ಪರಂದಯ್ಯರಿಗೆ ಕಣ್ಣು ಕಾಣದೆ ಮನೆಯಲ್ಲಿದ್ದರು. ಅತಿಯಾದ ಸಾಲ ಮಾಡಿಕೊಂಡಿದ್ದರು. ದಾನಮ್ಮ, ಪರಂದಯ್ಯ ಮತ್ತು ಅವರ ಮಗ ಮಂಜುನಾಥ ವಿಷ ಸೇವನೆ ಮಾಡಿದ್ದು, ಬೆಳಗ್ಗೆ ಅಕ್ಕ ಪಕ್ಕದ ಮನೆಯವರು ನೋಡಿದಾಗ ವೃದ್ಧ ದಂಪತಿಗಳಿಬ್ಬರು ಮೃತಪಟ್ಟಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಮಂಜುನಾಥ್ ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post