ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭದ್ರಾವತಿ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಕ್ರಮ ಕಸಾಯಿ ಖಾನೆಗಳು ಗೋಮಾಂಸ ಹೋಟೆಲ್ ಗಳು ತಲೆಯೆತ್ತಿವೆ. ಈ ಕಾನೂನು ಬಾಹಿರ ಚಟುವಟಿಕೆಯ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕೆಂದು ಹಿಂದು ಜಾಗರಣ ವೇದಿಕೆ ಶಿವಮೊಗ್ಗ ಜಿಲ್ಲಾ ಸಮಿತಿಯ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಭದ್ರಾವತಿ ಗೋ ಕಸಾಯಿಖಾನೆಗಳು ನಡೆಯುತ್ತಿರುವುದಕ್ಕೆ ನೈಜ್ಯ ಸಾಕ್ಷಿಯಂತೆ ಭದ್ರಾ ನದಿಯ ದಡದ ಮೇಲೆ ಸುಮಾರು ಎರಡರಿಂದ ಮೂರು ಟನ್ ರಷ್ಟು ಗೋವಿನ ಬುರುಡೆ ಮತ್ತು ಗೋಮಾಂಸದ ಮೂಳೆಗಳು ಶೇಖರಣೆ ಮಾಡಿರುವುದು ಬೆಳಕಿಗೆ ಬಂದಿದೆ. ಸಿಕ್ಕಿರುವ ಆಧಾರ ಇಟ್ಟುಕೊಂಡು ಈ ಕೃತ್ಯದ ಹಿಂದೆ ಇರುವ ಗೋ ಕಸಾಯಿ ಖಾನೆಗಳ ಮೇಲೆ ತಕ್ಷಣ ಗೋ ಹತ್ಯೆ ನಿಷೇಧ ಕಾನೂನು 2020 ರಂತೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಈ ಕೃತ್ಯದ ಹಿಂದಿರುವ ಎಲ್ಲರನ್ನೂ ಬಂಧಿಸಬೇಕು, ಎಂದು ಮನವಿಯಲ್ಲಿ ಹಿಂಜಾವೇ ಆಗ್ರಹಿಸಿದೆ.

Also read: ಕುವೆಂಪು ವಿವಿ ನೂತನ ಕುಲಸಚಿವರಾಗಿ ವಿಜಯ್‌ಕುಮಾರ್ ಅಧಿಕಾರ ಸ್ವೀಕಾರ
ಹಿಂದೂ ಜಾಗರಣ ವೇದಿಕೆ ಭದ್ರಾವತಿ, ಶಿಕಾರಿಪುರ, ಸೊರಬ, ಸಾಗರ, ಹೊಸನಗರ, ತಾಲೂಕು ಸಮಿತಿಯ ಕಾರ್ಯಕರ್ತರು ಮತ್ತು ಜಿಲ್ಲಾ ಜವಾಬ್ದಾರಿಯ ಕಾರ್ಯಕರ್ತರು ಆಗ್ರಹ ಪತ್ರವನ್ನು ನೀಡುವಾಗ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post