ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರಾಟೆ #Karate ಆತ್ಮರಕ್ಷಣೆಯ ಕಲೆಯಾಗಿದ್ದು, ನಿಮ್ಮ ರಕ್ಷಣೆಗಷ್ಟೇ ಅಲ್ಲ ದೇಶದ ರಕ್ಷಣೆಗೂ ಉಪಯೋಗಿಸಿಕೊಳ್ಳಿ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ #K S Eshwarappa ಹೇಳಿದರು.
ಅವರು ಇಂದು ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಶಿವಮೊಗ್ಗ ಕರಾಟೆ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಆರನೇ ಶಿವಮೊಗ್ಗ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ದೇಶ ವಿದೇಶಗಳಿಂದ ಭಾರತದಲ್ಲಿರುವ ಕರ್ನಾಟಕದ ಶಿವಮೊಗ್ಗಕ್ಕೆ ನೂರಾರು ಕ್ರೀಡಾಪಟುಗಳು ಸ್ಪರ್ಧೆಗೆ ಬಂದಿರುವುದು ನನಗೆ ಸಂತೋಷ ತಂದಿದೆ. ನಿಮಗೆಲ್ಲರಿಗೂ ನಾನು ಸಂಘಟಕರ ಪರವಾಗಿ ಆತ್ಮೀಯವಾಗಿ ಸ್ವಾಗತಿಸುತ್ತೇನೆ. ನಿಮ್ಮ ಸಾಧನೆಯನ್ನು ಮುಂದುವರಿಸಿ ನಾಡಿಗೆ, ದೇಶಕ್ಕೆ ಹೆಸರು ತನ್ನಿ. ಕರಾಟೆ ಎಂಬುದು ಆತ್ಮ ರಕ್ಷಣೆಯ ಕಲೆವೊಂದೇ ಅಲ್ಲ, ಅದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ದೃಢವಾಗುತ್ತದೆ. ಜೊತೆಗೆ ಜೀವನದಲ್ಲಿ ಶಿಸ್ತನ್ನು ಕೂಡ ಕಲಿಯಬಹುದು. ಈ ವಿದ್ಯೆಯ ಸದುಪಯೋಗವಾಗಲಿ. ಇತ್ತೀಚಿನ ದಿನಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಕೂಡ ಇದು ಜನಪ್ರಿಯ ಕಲೆಯಾಗಿ ಪಠ್ಯದ ಜೊತೆಗೆ ಕಲಿಸುತ್ತಿದ್ದು, ಮಕ್ಕಳಲ್ಲಿ ಧೈರ್ಯ ತುಂಬಲು ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ವಿನೋದ್, ಮಾಜಿ ಜಿ.ಪಂ. ಸದಸ್ಯ ಕೆ.ಈ. ಕಾಂತೇಶ್, ಬಹುಭಾಷಾ ನಟ ಹಾಗೂ ಕರಾಟೆಯಲ್ಲಿ 8 ಬ್ಲಾಕ್‌ಬೆಲ್ಟ್ ಪಡೆದ ಸುಮನ್ ತಲ್ವಾರ್, ಅಮೇರಿಕಾದ ಕರಾಟೆ ಗ್ರ್ಯಾಂಡ್‌ಮಾಸ್ಟರ್ ಫೆರಿಎಫ್. ಮೌಲೆ ಸಂಜಯ್ ಲಾವ, ಅಲ್ತಾಫ್ ಪಾಷಾ, ರಾಘವೇಂದ್ರ ಆರ್., ಶಶಿ, ಈ. ವಿಶ್ವಾಸ್ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post