ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೌಲ್ಯಯುತ ಸಮಾಜಮುಖಿ ಚಿಂತನೆಗಳೊಂದಿಗೆ ಶಿಕ್ಷಣದ ಕಲಿಕಾ ಪ್ರಕ್ರಿಯೆ ಮುನ್ನಡೆಯಬೇಕಿದೆ ಎಂದು ಕುವೆಂಪು ವಿಶ್ವವಿದ್ಯಾಲಯ Kuvempu University ಸಿಂಡಿಕೇಟ್ ಸದಸ್ಯರಾದ ಧರ್ಮಪ್ರಸಾದ್ ಅಭಿಪ್ರಾಯಪಟ್ಟರು
ಸೋಮವಾರ ನಗರದ ಎನ್.ಇ.ಎಸ್ ಇನ್ಸ್ಟೀಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್ ಕಾಲೇಜಿನ ವತಿಯಿಂದ ಪ್ರಥಮ ವರ್ಷದ ಬಿಕಾಂ ಬಿಬಿಎ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ‘ಅಭ್ಯುದಯ-೨೦೨೨’ ಓರಿಯಂಟೇಷನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿ ಕೇಂದ್ರಿತ ಕಲಿಕಾ ವ್ಯವಸ್ಥೆಯ ಒಳಗೆ ಕೌಶಲ್ಯತೆ ಮತ್ತು ಜೀವನ ಮೌಲ್ಯಗಳು ಪ್ರಮುಖ ಸ್ಥಾನ ಪಡೆದಿದೆ. ವ್ಯಸನಗಳಿಗೆ ಬಲಿಯಾಗದೇ ಸಮಾಜಮುಖಿ ವ್ಯಕ್ತಿತ್ವಗಳಾಗಿ ರೂಪಗೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಮಾತನಾಡಿ ಇಂದಿನ ವಿದ್ಯಾರ್ಥಿಗಳಿಗೆ ನಮ್ಮ ಮನೆ ಮನಗಳ ಸಂಸ್ಕೃತಿಯ ಶಿಕ್ಷಣ ಬೇಕಾಗಿದೆ. ಸಂಸ್ಕೃತಿ ಕೌಶಲ್ಯತೆಗಳ ಹೊರತಾಗಿ ಶಿಕ್ಷಣವನ್ನು ವ್ಯಾಖ್ಯಾನಿಸಲಾಗದು. ಈ ನಿಟ್ಟಿನಲ್ಲಿ ವಿವಿಧತೆಗಳ ನಡುವೆ ಶಿಕ್ಷಣ ರೂಪಗೊಳ್ಳಬೇಕಾಗಿದ್ದು, ನಮ್ಮ ನೆಲದ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಮೂಲಕ ಶೈಕ್ಷಣಿಕ ಕ್ರಿಯಾಶೀಲತೆಯಲ್ಲಿ ವಿದ್ಯಾರ್ಥಿಗಳು ಸಕ್ರಿಯರಾಗಿ ಎಂದು ಹೇಳಿದರು.
Also read: ಸೆ.17ರಂದು ಯೋಗಥಾನ್-2022: ಗಿನ್ನಿಸ್ ದಾಖಲೆಯತ್ತ ಯೋಗದ ನಡೆ
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪ್ರೊ.ಬಿ.ಎಸ್.ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ರೆಡ್ ಕ್ರಾಸ್ ಸಂಸ್ಥೆಯ ಡಾ.ವಿ.ಎಲ್.ಎಸ್ ಕುಮಾರ್, ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷರಾದ ಸಿ.ಆರ್.ನಾಗರಾಜ, ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















