ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ನವೆಂಬರ್ 5 ರಿಂದ 8ರವರೆಗೆ ಆಯೋಜಿಸಲಾಗಿದ್ದ ವಿಶ್ವೇಶ್ವರಾಯ ತಾಂತ್ರಿಕ ಮಹಾವಿದ್ಯಾಲಯ ಬೆಳಗಾವಿ, ಇದರ ಸೆಂಟ್ರಲ್ ಕರ್ನಾಟಕ ಡಿವಿಜನ್ ಕ್ರಿಕೆಟ್ ಟೂರ್ನಿಯಲ್ಲಿ #Cricket Tournament ಪಿಇಎಸ್ ಐಟಿಎಂ ತಂಡವು ಜಯಭೇರಿ ಬಾರಿಸಿತು.
ಈ ಟೂರ್ನಿಯಲ್ಲಿ ಒಟ್ಟು 16 ಕಾಲೇಜಿನ ಕ್ರಿಕೆಟ್ ತಂಡಗಳು ಭಾಗವಹಿಸಿದ್ದವು. ಮೊದಲ ಸೆಮಿಫೈನಲ್‌ನಲ್ಲಿ ಶಿವಮೊಗ್ಗದ ಜೆಎನ್‌ಎನ್‌ಸಿ ಇಂಜಿನಿಯರಿಂಗ್ ಕಾಲೇಜು ಹಾಗೂ ಹಾಸನದ ಮಲೆನಾಡ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ತಂಡಗಳು ಭಾಗವಹಿಸಿ ಮಲೆನಾಡ್ ಕಾಲೇಜ್ ಆಫ್ ಇಂಜಿನಿಯರಿಂಗ್ ತಂಡವು ಫೈನಲ್ ಪ್ರವೇಶಿಸಿತು.

Also read: ಮಕ್ಕಳ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ: ಗ್ರಾಪಂ ಅಧ್ಯಕ್ಷ ಕೇಶವ
ಫೈನಲ್ ಪಂದ್ಯದಲ್ಲಿ ಹಾಸನದ ಮಲೆನಾಡ್ ಕಾಲೇಜ್ ಆಫ್ ಇಂಜಿನಿಯರಿಂಗ್ ಹಾಗೂ ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ನಡುವೆ ನಡೆದ ರೋಚಕ ಪಂದ್ಯಾವಳಿ ಏರ್ಪಟ್ಟಿತು. ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಿಇಎಸ್ ಐಟಿಎಂ ತಂಡವು 164 ರನ್ನುಗಳ ಗುರಿಯನ್ನು ನೀಡಿತು. ನಂತರ ಬ್ಯಾಟ್ ಮಾಡಿದ ಹಾಸನದ ಮಲೆನಾಡ್ ಕಾಲೇಜ್‌ನ ತಂಡವು 91 ರನ್‌ಗಳಿಗೆ ಸರ್ವಪತನವನ್ನು ಕಂಡಿತು. ಈ ಮೂಲಕ 67 ರನ್‌ಗಳಿಂದ ಪಿಇಎಸ್ ಐಟಿಎಂ ತಂಡವು ಜಯಭೇರಿಯನ್ನು ಬಾರಿಸಿತು. ಫೈನಲ್ ಪ್ರವೇಶಿಸಿದ ಎರಡೂ ತಂಡಗಳು ವಿಟಿಯುನ ಇಂಟರ್‌ಝೋನ್ ಪಂದ್ಯಾವಳಿಯಲ್ಲಿ ಆಡಲು ಅರ್ಹತೆ ಪಡೆದಿವೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post