ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ Shimoga City Water Supply and Sewerage Board ನಿರ್ವಹಣಾ ವಿಭಾಗ ಮತ್ತು ಉಪವಿಭಾಗವು ಜ.7ರಿಂದ 2023-24 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕಂದಾಯ ವಸೂಲಾತಿಗಾಗಿ ನಗರದ ಹಲವು ಕಡೆಗಳಲ್ಲಿ ಕೌಂಟರ್ ಆರಂಭಿಸಲಾಗುತ್ತಿದೆ.
ಎಲ್ಲೆಲ್ಲಿ ಕೌಂಟರ್ ಆರಂಭ?
ಭಾರತೀಯ ಸಭಾಭವನ ಎದುರು, ಆರ್’ಎಂಎಲ್ ನಗರ, ಬಸವೇಶ್ವರ ದೇವಸ್ಥಾನದ ಹತ್ತಿರ, ಗಾಂಧಿ ಬಜಾರ್, ದೇವರಾಜ್ ಅರಸ್ ಬಡಾವಣೆ ಪೆಟ್ರೋಲ್ ಬಂಕ್ ಹತ್ತಿರ, ಸೋಮಿನಕೊಪ್ಪ ರಸ್ತೆ, ಬಾಪೂಜಿನಗರ ಮುಖ್ಯರಸ್ತೆ ರಾಮಮಂದಿರ ಹತ್ತಿರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪಾರ್ಕ್, Dr. Ambedkar Park ದ್ರೌಪದಮ್ಮ ಸರ್ಕಲ್ ಆಟೋ ಸ್ಟಾಂಡ್ ಹತ್ತಿರ ಈ ಎಲ್ಲಾ ಕಡೆಗಳಲ್ಲಿ ವಿಶೇಷ ನೀರಿನ ಕಂದಾಯ ವಸೂಲಾತಿ ಕೌಂರ್‌ಗಳನ್ನು ತೆರೆಯಲಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post