ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾಡಾ CADA ಸಭೆಯಲ್ಲಿ ಭದ್ರಾ ಎಡದಂಡೆ Bhadra Canal ಹಾಗೂ ಬಲದಂಡೆಯ ನಾಲೆಯಲ್ಲಿ ರೈತರ ಬೆಳೆಗಳಿಗೆ ನೀರು ಹರಿಸುವ ಬಗ್ಗೆ ನಾಲೆಯ ಎರಡು ಭಾಗದ ರೈತ ಮುಖಂಡರ ಹಾಗೂ ತಜ್ಞರ ಸಮಿತಿಯ ಸಭೆಯ ಬಳಿಕ ತೆಗೆದುಕೊಂಡ ತೀರ್ಮಾನವನ್ನು ವಿರೋಧಿಸಿ ರೈತರು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ರಸ್ತೆ ತಡೆ ನಡೆಸಿ ಅರ್ಧಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು.
ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಕ್ಕೆ ನಮ್ಮ ಆಕ್ಷೇಪವಿದೆ. ಎಡದಂತೆ ನಾಲೆಗೆ ಜ.10ರಿಂದ 5 ಹಂತದಲ್ಲಿ ನೀರು ಬಿಡುಗಡೆ ಮಾಡುವ ತೀರ್ಮಾನವಾಗಿದೆ. ಬಲದಂಡೆಗೆ ಜ.20ರಿಂದ ನೀರು ಬಿಡುಗಡೆ ಮಾಡುವ ತೀರ್ಮಾನವಾಗಿದೆ. ಇದರಿಂದ ಎರಡು ಭಾಗದ ರೈತರ ಬೆಳೆ ನಾಶವಾಗಲಿದೆ. ಈ ನಿರ್ಣಯದ ವಿರುದ್ಧ ಉಸ್ತುವಾರಿ ಸಚಿವರನ್ನು ಪ್ರಶ್ನಿಸಲು ರೈತರು ಹೊರಗಡೆ ಕಾಯುತ್ತಿದ್ದರು. ಸಚಿವರು ರೈತರಿಗೆ ಸಿಗದ ಕಾರಣ ಕೋಪೋದ್ರಿಕ್ತರಾದ ರೈತರು ಏಕಾಏಕಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಇದರಿಂದ ಮೈಲುಗಟ್ಟಲೆ ಎರಡು ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ರೈತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು. ಶಾಸಕ ಸಂಗಮೇಶ್ ರೈತ ನಾಯಕರಾದ ಹೆಚ್.ಆರ್.ಬಸವರಾಜಪ್ಪ ಹಾಗೂ ಕೆ.ಟಿ. ಗಂಗಾಧರವರವನ್ನು ರೈತರು ಘೆರಾವು ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
Also read: ಎಡದಂಡೆ ನಾಲೆಗೆ ಜ.10 ಮತ್ತು ಬಲದಂಡೆ ನಾಲೆಗೆ ಜ.20 ರಿಂದ ನೀರು: ಸಚಿವ ಮಧು ಬಂಗಾರಪ್ಪ
ಈ ಸಂದರ್ಭದಲ್ಲಿ ಮಾತನಾಡಿದ ರೈತ ನಾಯಕರು ಬರಗಾಲ ಬಂದಿದೆ. ನೀರಿನ ಸಂಗ್ರಹವಿಲ್ಲ. ಕುಡಿಯುವ ನೀರು ಸಿಗುವುದೇ ಕಷ್ಟವಾಗಿದೆ. ಭತ್ತದ ಬೆಳೆಗಳಿಗೆ ನೀರು ಕೊಡುವುದಿಲ್ಲ ಎಂದು ಮೊದಲೇ ತೀರ್ಮಾನಿಸಿದ್ದೇವೆ. ಆದರು ಕೂಡ ಇರುವ ನೀರನ್ನು ಸರಿಯಾಗಿ ಹಂಚುವ ದಿಕ್ಕಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಎಡದಂಡೆ ನಾಲೆಯ ವ್ಯಾಪ್ತಿಯಲ್ಲಿ 25 ಸಾವಿರ ಹೆಕ್ಟೇರ್ ಇದ್ದು, ಬಲದಂಡೆ ನಾಲೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳೆ ಬೆಳೆದಿದ್ದು, ಈಗಿನ ಪ್ರಕಾರ ನಿಗದಿತ ಅವಧಿಯಲ್ಲಿ ನೀರು ಹರಿಸಿದರು ಕೂಡ ಕೊನೆಯ ಭಾಗದ ರೈತರಿಗೆ ತಲುಪುವುದು ಕಷ್ಟಾಸಾಧ್ಯ ಎಂಬ ಕೂಗು ಕೇಳಿಬರುತ್ತಿದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಕೆಲವೊಂದು ನಿರ್ಧಾರಗಳಿಗೆ ಒಪ್ಪಿಗೆ ನೀಡಿದ್ದೇವೆ. ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಚರ್ಚೆಯ ನಂತರ ಒಂದು ಭಾಗದ ರಸ್ತೆಯನ್ನು ಸಂಚಾರಕ್ಕೆ ತೆರವುಗೊಳಿಸಲಾಯಿತು. ಆದರೆ, ಇನ್ನೊಂದು ಭಾಗದಲ್ಲಿ ರೈತರು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಬೆಳಗೆಯಿಂದಲೇ ಸಮಿತಿಯ ಸಭೆಗೆ ಯಾವುದೇ ತೊಂದರೆ ನೀಡದೇ ಶಾಂತ ಚಿತ್ತದಿಂದ ರೈತರೆಲ್ಲರೂ ಕಾಯುತ್ತ ಕೂತಿದ್ದರು.
ನಮಗೆ ಒಳಗೆ ಬಿಟ್ಟಿಲ್ಲ. ಈಗ ಸಚಿವರ ಏಕಾಏಕಿ ಜಾಗ ಖಾಲಿ ಮಾಡಿದ್ದಾರೆ. ನೀರು ಹರಿಸುವ ವೇಳಪಟ್ಟಿಗೆ ನಮ್ಮ ವಿರೋಧವಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post