ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಗನ ಮದುವೆಗಾಗಿ ಸೀರೆ ತರಲು ತಮಿಳುನಾಡಿಗೆ ತೆರಳಿದ್ದ ಸಾಹಸಿ, ತರುಣೋದಯ ಘಟಕದ ಅ.ನಾ. ವಿಜಯೇಂದ್ರ ದಂಪತಿಗಳು ನೀತಿ ಸಂಹಿತೆ Code of conduct ಅಡಿಯಲ್ಲಿ ಸಿಲುಕಿ, ಪರಿಪಾಟಲು ಪಟ್ಟು, ವಾಪಾಸು ಬಂದಿರುವ ಘಟನೆ ನಡೆದಿದೆ.
ಅ.ನಾ. ವಿಜಯೇಂದ್ರ ರಾವ್ ದಂಪತಿಗಳು ತಮ್ಮ ಮಗನ ಮದುವೆಗಾಗಿ ಸೀರೆ ತರಲು ತಮಿಳುನಾಡಿನ ಸೇಲಂಗೆ ತೆರಳಿದ್ದರು. ಎಲ್ಲ ಖರೀದಿ ಮಾಡಿಕೊಂಡು ಹಿಂದಿರುಗುವ ವೇಳೆ ಜಾರಿಯಾಗಿದ್ದ ನೀತಿ ಸಂಹಿತೆ ಬಿಸಿ ತಟ್ಟಿದೆ.

Also read: ಮಾರ್ಚ್ 25ರಿಂದ SSLC ಪರೀಕ್ಷೆ | ಯಾವತ್ತು ಯಾವ ಪತ್ರಿಕೆ? ಎಷ್ಟು ವಿದ್ಯಾರ್ಥಿಗಳು ಬರೆಯಲಿದ್ದಾರೆ?
ಮದುವೆ ಆಮಂತ್ರಣ ಪತ್ರ, ದಾಖಲೆ ತೋರಿಸಿದರೂ ಚುನಾವಣಾ ಅಧಿಕಾರಿಗಳು ಒಪ್ಪಲಿಲ್ಲ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ದಂಪತಿ ಬೆಳಗ್ಗೆಯಿಂದ ಉಪಹಾರ ಇಲ್ಲದೇ ಪರದಾಟ ಅನುಭವಿಸಿದ್ದರು. ದಂಪತಿ ಬಳಿ ಇದ್ದ ಹಣವನ್ನೆಲ್ಲಾ ಕೂಡ ವಶಕ್ಕೆ ಪಡೆದಿದ್ದರು.
ಆನಂತರ ಮಾರ್ಚ್ 17ರಂದು ಜಫ್ತಿ ಮಾಡಿದ್ದ 89 ಸೀರೆ ಮತ್ತು 40230.00 ರೂಪಾಯಿಯನ್ನು ಎಲ್ಲಾ ಸೂಕ್ತ ದಾಖಲೆಯನ್ನು ಅ.ನಾ.ವಿಜಯೇಂದ್ರ ರಾವ್ ಒದಗಿಸಿ 18-03-2024 ರ ಮಧ್ಯಾಹ್ನ 2.15 ಕ್ಕೆ ಪಡೆದರು.

ಈ ಸಂದರ್ಭದಲ್ಲಿ ಎಸಿ ಅವರು ರೂ. 40,000 ನಗದು ಎಲ್ಲಿಂದ ತೆಗೆದುಕೊಂಡು ಬಂದಿದ್ದೀರಿ ಅದರ ಬಗ್ಗೆ ದಾಖಲೆ ಒದಗಿಸಿ ಎಂದು ಕೇಳಿದ್ದಾರೆ. ಇದಕ್ಕೆ ವಿಜಯೇಂದ್ರ ಅವರು ಈ ಹಣ ಬಹಳ ದಿನಗಳಿಂದ ಉಳಿಸಿಕೊಂಡು ಬಂದಿದ್ದು ಎಂದು ಹೇಳಿ ಪತ್ರ ಬರೆದುಕೊಟ್ಟ ಮೇಲೆ ರಿಲೀಸ್ ಲೆಟರ್ ಕೊಡುವಂತೆ ತಮ್ಮ ಅಧಿಕಾರಿಗೆ ಎಸಿ ತಿಳಿಸಿದರು.
ಆನಂತರ ಚುನಾವಣಾ ಕಚೇರಿಯಲ್ಲಿ ಸುಮಾರು ಎರಡು ಗಂಟೆ ಸಮಯದ ನಂತರ ಮಧ್ಯಾಹ್ನ 2.15. ಕ್ಕೆ ತಮ್ಮ ವಸ್ತುಗಳು ಮತ್ತು ನಗದು ಹಣ ಪಡೆದುಕೊಂಡು, ಶಿವಮೊಗ್ಗಕ್ಕೆ ಮರಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post