ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಚುನಾವಣೆ ವೇಳೆ ವಿವಾದಕ್ಕೆ ಕಾರಣವಾಗಿರುವ ಜಾತಿ ರಾಜಕಾರಣದ ಕುರಿತಾಗಿ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದರಲ್ಲಿ ನನಗೆ ನಂಬಿಕೆಯಿಲ್ಲ ಎಂದಿದ್ದಾರೆ.
ನಗರದಲ್ಲಿ ಮಾತನಾಡಿರುವ ಅವರು, ಜಾತಿ ರಾಜಕಾರಣದ ಬಗ್ಗೆ ನನಗೆ ನಂಬಿಕೆ ಇಲ್ಲ. ಇದನ್ನು ಬಿಂಬಿಸುವುದು ಕೂಡ ಸರಿಯಲ್ಲ. ಜಾತಿಯ ಬಗ್ಗೆ ಯಾರೇ ಆಗಲಿ, ಮಾತನಾಡುವುದು ತಪ್ಪು. ಇದರಿಂದ ತೊಂದರೆಯೇ ವಿನಾ ಲಾಭವಂತೂ ಇಲ್ಲ ಎಂದರು.
ಜನರು ಅಭಿವೃದ್ಧಿಯನ್ನು ನೋಡಿ ಮತ ನೀಡುತ್ತಾರೆಯೇ ಹೊರತು ಜಾತಿಯ ಆಧಾರದ ಮೇಲೆ ಅಲ್ಲ. ಜನರಿಗೆ ಜಾತಿಯ ಮೇಲೆ ಕಿಮ್ಮತ್ತೂ ಇಲ್ಲ. ಹೀಗೆ ಮಾತನಾಡುತ್ತಾ ನಮ್ಮನ್ನು ನಾವೇ ಕೆಳಮಟ್ಟಕ್ಕೆ ತಂದುಕೊಳ್ಳತ್ತೇವೆ. ಮತದಾರರು ಇಂದು ಪ್ರಬುದ್ಧರಾಗಿದ್ದಾರೆ. ಜಾತಿ ಬಗ್ಗೆ ಮಾತನಾಡಿದರೆ ಕೇಳುವುದಿಲ್ಲ ಎಂದು ಪರೋಕ್ಷವಾಗಿ ಎಚ್.ಡಿ. ಕುಮಾರಸ್ವಾಮಿಯವರಿಗೆ ಟಾಂಗ್ ನೀಡಿದರು.
Also read: ಡಿಕೆಶಿ ಪುತ್ರಿ ಐಶ್ವರ್ಯಾಗೂ ಸಿಬಿಐ ಶಾಕ್! 10 ದಿನದಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್
ಶರಾವತಿ ಸಂತ್ರಸ್ತರ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಲಾಗುವುದು. ಈ ಹಿಂದೆಯೂ ಈ ಬಗ್ಗೆ ಭರವಸೆ ನೀಡಿದ್ದೇನೆ. ಈಗಾಗಲೇ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಕಾನೂನಿನ ಚೌಕಟ್ಟಿನಲ್ಲಿಯೇ ಸಮಸ್ಯೆ ಪರಿಹಾರದ ಮಾರ್ಗವನ್ನು ಹುಡುಕುತ್ತೇನೆ. ಸಂತ್ರಸ್ತರು ಆತಂಕಪಡುವ ಅಗತ್ಯಲ್ಲ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post