ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದಲ್ಲಿ ಸದಾಕಾಲ ಶಾಂತಿ ಕದಡುವ ಕೆಲಸ ಮಾಡುವ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಯಾವಾಗ ಲ್ಯಾಬೊರೇಟರಿಯಲ್ಲಿ ಕೆಲಸ ಮಾಡಿದ್ದರು ಎಂದು ಮಾಜಿ ಸಂಸದ, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಕಟಕಿಯಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈಶ್ವರಪ್ಪನವರ ಶಿವಮೊಗ್ಗದಲ್ಲಿ ಸದಾ ಕಾಲ ಶಾಂತಿ ಕದಡುವ ಕಾರ್ಯ ಮಾಡುತ್ತಿದ್ದಾರೆ. ಕುರಿ ಕೊಚ್ಚುವ ರೀತಿಯಲ್ಲಿ ಕೊಚ್ಚಿ ಹಾಕುತ್ತೇವೆ ಎಂದು ಮತ್ತೆ ಮತ್ತೆ ಉದ್ರೇಕಕಾರಿಯಾಗಿ ಮಾತನಾಡುತ್ತಿದ್ದಾರೆ. ಹಸಿರು ರಕ್ತ, ಕೆಂಪು ರಕ್ತ ಎನ್ನುತ್ತಿದ್ದಾರೆ. ಇವರು ಯಾವಾಗ ಲ್ಯಾಬೋರೇಟರಿಯಲ್ಲಿ ಕೆಲಸ ಮಾಡಿದ್ದರು ಎಂದು ಪ್ರಶ್ನಿಸಿದರು.
ಲೋಕಸಭಾ ಚುಣಾವಣೆಗೆ ಪಕ್ಷ ಸಿದ್ದವಾಗುತ್ತಿದ್ದು, ನಾನು ಚುನಾವಣಾ ಸ್ಪರ್ಧಾಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು.
Also read: ಅಧಿಕಾರದಲ್ಲಿ ಇಲ್ಲದಿದ್ದರೂ ಪೈಲಟ್ ಯಾಕೆ: ಈಶ್ವರಪ್ಪನವರಿಗೆ ಆಯನೂರು ಮಂಜುನಾಥ್ ಪ್ರಶ್ನೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post