ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೆಂಗಳೂರು ಜಿಟಿ ಮಾಲ್ ನಲ್ಲಿ #Bangalore GT Mall ರೈತನಿಗೆ ಪ್ರವೇಶ ನಿರಾಕರಣೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಂಸದ ಬಿ.ವೈ. ರಾಘವೇಂದ್ರ, #MP B Y Raghavendra ಅವಮಾನವಾದಾಗ ಪ್ರಶ್ನಿಸುವುದು ನಮ್ಮ ಹಕ್ಕು. ಈ ಪ್ರವೃತ್ತಿಯನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು ಎಂದಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಘಟನೆಗಳು ಈ ಹಿಂದೆ ಅನೇಕ ಬಾರಿ ನಡೆದಿವೆ. ಸಣ್ಣ ಮನಸ್ಸಿನ ದೊಡ್ಡ ವ್ಯಕ್ತಿಗಳು ಈ ರೀತಿಯ ಕೆಲಸ ಮಾಡುತ್ತಾರೆ. ಆ ರೈತ ಕೂಡ ಹೋರಾಟ ಮಾಡಿ ಮಾಲ್ ಮಾಲಿಕನಿಂದ ಕ್ಷಮೆ ಯಾಚಿಸುವಂತೆ ಮಾಡಿದ್ದಾನೆ. ನಾನು ಕೂಡ ದೇಶಕ್ಕೆ ಅನ್ನ ನೀಡಿದ್ದೇನೆ ಎಂಬ ಹಕ್ಕಿನಿಂದ ರೈತ ಪ್ರಶ್ನೆ ಮಾಡಿರುವುದು ಸರಿ ಇದೆ ಎಂದರು.
Also read: ಸೊರಬ | ರಣ ಮಳೆ | ರಸ್ತೆಗೆ ಉರುಳಿದ ಬೃಹತ್ ಮರ | ಸಂಚಾರ ಅಸ್ತವ್ಯಸ್ತ |
ನಮಗೆ ಅವಮಾನವಾದಾಗ ಯಾಕೆ ಎಂದು ಕೇಳುವ ಪ್ರವೃತ್ತಿ ಬೆಳೆಸಿಕೊಳ್ಳದೇ ಹೋದರೆ ಈ ರೀತಿಯ ಅವಮಾನಗಳು ಆಗುತ್ತಲೇ ಇರುತ್ತದೆ. ಈ ರೀತಿ ವರ್ತನೆಯನ್ನು ಯಾರು ತೋರಬಾರದು. ಗೌರವಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಎಂದರು.
ಕಳಪೆ ಕಾಮಗಾರಿಯಿಂದಾಗಿ ರಾಷ್ಟ್ರೀಯ ಹೆದ್ದಾರಿ ತಡೆ ಗೋಡೆ ಕುಸಿದಿದೆಯಾ? ಅಥವಾ ಯಾವ ಕಾರಣಕ್ಕಾಗಿ ಈ ರೀತಿಯಾಗಿದೆ ಎಂಬುದು ತಿಳಿಯಬೇಕಿದೆ. ನಾನು ದೆಹಲಿಗೆ ಹೋದಾಗ ಈ ಬಗ್ಗೆ ಅಧಿಕಾರಿಗಳ ಬಳಿ ಚರ್ಚಿಸಲಿದ್ದೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post