ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೆಂಗಳೂರು ಹಾಗೂ ಶಿವಮೊಗ್ಗ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ಮನವಿ ಮಾಡಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ಹೇಳಿದ್ದಾರೆ.
ಸುಮಾರು 41 ಸಾವಿರ ಕೋಟಿ ರೂ. ವೆಚ್ಚದಲ್ಲಿ ದೇಶದಾದ್ಯಂತ ಸಾಲು ಸಾಲು ರೈಲ್ವೆ ಯೋಜನೆಗಳಿಗೆ ಪ್ರಧಾನಿಯವರು ವರ್ಚುವಲ್ ಮೂಲಕ ಚಾಲನೆ ನೀಡಿದರು. ಈ ಕಾರ್ಯಕ್ರಮದ ಸಮಯದಲ್ಲೇ ಅರಸಾಳು ರೈಲ್ವೆ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ನೇರಪ್ರಸಾರ ಹಾಗೂ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಂದಿನ ಬಾರಿ ಮಂಡಿಸುವ ಆಯವ್ಯಯದಲ್ಲಿ 400 ವಂದೇ ಭಾರತ್ ರೈಲುಗಳನ್ನು Vande Bharat Train ಆರಂಭಿಸಲಾಗುವುದು ಎಂದು ಪ್ರಧಾನಿಯವರು ತಿಳಿಸಿದ್ದಾರೆ. ಇದಕ್ಕೂ ಮೊದಲು ಅಥವಾ ಅದೇ ಸಮಯದಲ್ಲಿ ಶಿವಮೊಗ್ಗಕ್ಕೂ ವಂದೇ ಭಾರತ್ ರೈಲು ಸಂಚಾರವನ್ನು ಆರಂಭಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
Also read: ಯಾವಾಗ್ಲೂ ಪ್ಯಾರಾಸಿಟಮಾಲ್ ಮಾತ್ರೆ ತಗೋತೀರಾ? ಹಾಗಾದ್ರೆ ನಿಮಗೂ ಈ ಸಮಸ್ಯೆ ಬರಬಹುದು ಎಚ್ಚರ
ದೇಶದಾದ್ಯಂತ 553 ರೈಲು ನಿಲ್ದಾಣಗಳು ಅಪ್’ಗ್ರೇಡ್ ಆಗಲಿದೆ. ರಾಜ್ಯದಲ್ಲಿ 15 ರೈಲು ನಿಲ್ದಾಣಗಳು 373 ಕೋಟಿಯಲ್ಲಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ ಎಂದರು.
ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ಮೂರು ರೈಲ್ವೆ ನಿಲ್ದಾಣಗಳು ಈ ಯೋಜನೆಯಲ್ಲಿ ಸೇರಿದ್ದು, ಕ್ರಮವಾಗಿ ಶಿವಮೊಗ್ಗ ನಗರ 24.37 ಕೋಟಿ, ಸಾಗರ 26.44 ಕೋಟಿ ಮತ್ತು ತಾಳಗುಪ್ಪ 27.86 ಕೋಟಿ ಒಟ್ಟು 78.67 ಕೋಟಿ ಮೊತ್ತದ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ PM Narendra Modi ಅವರು ವರ್ಚುವಲ್ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು ಎಂದರು.
ಈ ಮೊದಲು 67 ವರ್ಷಗಳಲ್ಲಿ ನಡೆದ ಸಾಧನೆಗಳು ಒಂದಾದರೆ 10 ವರ್ಷಗಳಲ್ಲಿ ಆದ ಸಾಧನೆ ಮತ್ತೊಂದೆಡೆ ಆಗಿದೆ. ದೇಶದ ಸ್ವಾತಂತ್ರö್ಯ ದೊರೆತು 75 ವರ್ಷ ಕಳೆದ ಹಿನ್ನಲೆಯಲ್ಲಿ ಅಮೃತ ಮಹೋತ್ಸವ ಆಚರಣೆಯಲ್ಲಿರುವ ನಮಗೆ ದೇಶದಾದ್ಯಂತ ಮೇಲ್ದರ್ಜೆಗೆ ಏರಿಸುವ ರೈಲು ನಿಲ್ದಾಣವನ್ನ ಅಮೃತ ಭಾರತ್ ಯೋಜನೆ ಅಡಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post