ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸುಬ್ಬಯ್ಯ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಮಲ್ನಾಡ್ ಎಜುಕೇಶನ್ ಜಾತ್ರೆ-2025 ಎಂಬ ಕಾರ್ಯಕ್ರಮವನ್ನು ಸೇಕ್ರೆಡ್ ಹಾರ್ಟ್ ಸಮುದಾಯ ಭವನದಲ್ಲಿ ಮಾರ್ಚ್ 23ರಂದು ಬೆಳಿಗ್ಗೆ 9.30ಕ್ಕೆ ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲೆ ವನಮಾಲಾ ಸತೀಶ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಿಯುಸಿ ಆದ ಮೇಲೆ ಯಾವ ಕೋರ್ಸ್‍ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಯೋಚನೆ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಇರುತ್ತದೆ. ಅಲ್ಲದೆ ಮೆಡಿಕಲ್ ಸಂಬಂಧಪಟ್ಟಂತೆ ಕೋರ್ಸ್‍ಗಳ ಬಗ್ಗೆ ಮಾಹಿತಿಗಳು ಇರುವುದಿಲ್ಲ. ಈಗ ಮೆಡಿಕಲ್ ಆಸ್ಪತ್ರೆಗಳಲ್ಲಿ ನರ್ಸಿಂಗ್ ಕೋರ್ಸ್ ಸೇರಿದಂತೆ ಹಲವು ವೈದ್ಯಕೀಯ ಕೋರ್ಸ್‍ಗಳು #Medical Course ಬಂದಿವೆ. ಈ ಎಲ್ಲಾ ಕೋರ್ಸ್‍ಗಳಿಗೆ ಸಿಇಟಿ ಬರೆಯಲೇಬೇಕಾಗಿದೆ. ಈ ಮಾಹಿತಿ ಕೂಡ ಇರುವುದಿಲ್ಲ ಎಂದರು.
ಶಿವಮೊಗ್ಗ ಮತ್ತು ನೆರೆಹೊರೆಯ ಪ್ರದೇಶಗಳ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಹೊಸ ತಾಂತ್ರಿಕ, ನವೀನ ಮತ್ತು ಉದ್ಯೋಗ ಆಧಾರಿತ ವೃತ್ತಿಪರ ಕೋರ್ಸ್‍ಗಳನ್ನು ಪರಿಚಯಿಸುವುದು ಮತ್ತು ಅಂತಹ ಕಾರ್ಯಕ್ರಮಗಳನ್ನು ನೀಡುತ್ತಿರುವ ಕರ್ನಾಟಕದಲ್ಲಿರುವ ವಿವಿಧ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳನ್ನು ಪರಿಚಯಿಸುವುದು ಈ ಶೈಕ್ಷಣಿಕ ಜಾತ್ರೆಯ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
Also read: ಮೌಲ್ಯಾಧಾರಿತ ಶಿಕ್ಷಣಕ್ಕೆ ಈಶ್ವರಪ್ಪ ಮತ್ತೊಂದು ಕೊಡುಗೆ | ಮಾರ್ಚ್ 23 | ಪೇಸ್ ಇಂಟರ್’ನ್ಯಾಶನಲ್ ಸ್ಕೂಲ್ ಆರಂಭ
ನಮ್ಮ ಈ ಪ್ರಯತ್ನವು ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಯೋಗ್ಯತೆ ಮತ್ತು ಕೈಗೆಟುಕುವ ಬೆಲೆಗೆ ಅನುಗುಣವಾಗಿ ಸರಿಯಾದ ಕೋರ್ಸ್ ಅನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಶಿವಮೊಗ್ಗದ ಶಿಕ್ಷಣ ಸಂಸ್ಥೆಗಳು ಶಿವಮೊಗ್ಗದಲ್ಲಿ ನವೀನ ಮತ್ತು ಇತ್ತೀಚಿನ ವೃತ್ತಿಪರ ಕೋರ್ಸ್‍ಗಳನ್ನು ಯೋಜಿಸಲು ಮತ್ತು ಪರಿಚಯಿಸಲು ಸಾಧ್ಯವಾಗುತ್ತದೆ ಇದರಿಂದ ವಿದ್ಯಾರ್ಥಿಗಳು ದೇಶ ಮತ್ತು ವಿದೇಶಗಳ ವಿವಿಧ ಭಾಗಗಳಿಂದ ಶಿವಮೊಗ್ಗಕ್ಕೆ ಆಕರ್ಷಿತರಾಗಬಹುದು ಎಂದರು.
ಡಾ.ಜೋಲಿ ಮಾತನಾಡಿ, ಶಿವಮೊಗ್ಗ, ಬೆಂಗಳೂರು, ಮಂಗಳೂರು ಮುಂತಾದೆಡೆ ವೈದ್ಯಕೀಯ, ಇಂಜಿನಿಯರಿಂಗ್, ಅಲೈಡ್ ಹೆಲ್ತ್ ಸೈನ್ಸ್, ನರ್ಸಿಂಗ್, ಫಿಸಿಯೋಥೆರಪಿ, ಮ್ಯಾನೇಜ್‍ಮೆಂಟ್, ಮಾಹಿತಿ ತಂತ್ರಜ್ಞಾನ, ಸಮಾಜ ವಿಜ್ಞಾನ, ಮ್ಯಾನೇಜ್‍ಮೆಂಟ್, ಸೈಕಾಲಜಿ ಇತ್ಯಾದಿ ಶಿಕ್ಷಣ ನೀಡುವ ಸಂಸ್ಥೆಗಳು ಭಾಗವಹಿಸಿ ತಾವು ನೀಡುವ ವಿವಿಧ ಕೋರ್ಸ್‍ಗಳನ್ನು ಪ್ರದರ್ಶಿಸಲಿವೆ. ಪಾಲಕರು ಮತ್ತು ವಿದ್ಯಾರ್ಥಿಗಳು ಶುಲ್ಕ ರಿಯಾಯಿತಿ ಮತ್ತು ವಿದ್ಯಾರ್ಥಿವೇತನವನ್ನು ಸಹ ಪಡೆಯಬಹುದು ಎಂದರು.
ಓಇಇಖಿ ಮತ್ತು ಅಇಖಿ ಸಿದ್ಧತೆಗಳ ಕುರಿತು ತಜ್ಞರು ತರಗತಿಗಳನ್ನು ಸಹ ತೊಡಗಿಸಿಕೊಳ್ಳುತ್ತಾರೆ. ಸಂಜೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಶಿವಮೊಗ್ಗ ಮತ್ತು ನೆರೆಯ ಜಿಲ್ಲೆಗಳ ವಿದ್ಯಾರ್ಥಿಗಳು ಮತ್ತು ಪೋಷಕರು ಇದರ ಸದುಪಯೋಗ ಪಡೆಯಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ನರ್ಸಿಂಗ್ ಸೂಪರೇಡೆಂಟ್ ಪಲ್ಲವಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post