ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಇಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ವಿದ್ಯುತ್ ದೀಪ ಆರಿಸಿ, ದೀಪ ಪ್ರಜ್ವಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆಗೆ ಮಲೆನಾಡಿನ ಮಂದಿ ಸಂಪೂರ್ಣ ಪ್ರತಿಕ್ರಿಯಿಸಿದ್ದಾರೆ.
ಜಿಲ್ಲಾ ಕೇಂದ್ರ ಶಿವಮೊಗ್ಗ ಸೇರಿದಂತೆ ತಾಲೂಕು ಕೇಂದ್ರಗಳು ಮಾತ್ರವಲ್ಲ ಗ್ರಾಮೀಣ ಭಾಗದಲ್ಲೂ ಸಹ ಜನರು ಸರಿಯಾಗಿ 9 ಗಂಟೆಗೆ ದೀಪ ಪ್ರಜ್ವಲಿಸಿ, ಕೊರೋನಾ ವಿರುದ್ಧ ಹೋರಾಟಕ್ಕೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ವಿಶೇಷ ಎಂದರೆ ಕ್ಯಾಂಡಲ್ ಹಚ್ಚಿದ್ದಕ್ಕಿಂತಲೂ ಜನರು ಎಣ್ಣೆ ದೀಪವನ್ನೇ ಹೆಚ್ಚಾಗಿ ಹಚ್ಚಿದ್ದು, ಸನಾತನ ಸಂಸ್ಕೃತಿಯ ವೈಭವವನ್ನು ಸಾರಿದ್ದಾರೆ.
ಫೋಟೋ ಗ್ಯಾಲರಿ ನೋಡಿ:
Get in Touch With Us info@kalpa.news Whatsapp: 9481252093
Discussion about this post