ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪನವರು KSEshwarappa ಅಧಿಕಾರದಲ್ಲಿ ಇಲ್ಲದೇ ಇದ್ದರೂ ಸರ್ಕಾರದ ಹಣ ವ್ಯಯ ಮಾಡಿ ಪೈಲಟ್ ವಾಹನ ಇಟ್ಟುಕೊಂಡು ಓಡಾಡುವುದು ಯಾಕೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ Ayanuru Manjunath ಪ್ರಶ್ನಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪನವರಿಗೆ ಈಗ ಯಾವುದೇ ಸಾಂವಿಧಾನಿಕ ಹುದ್ದೆಯಿಲ್ಲ. ಆದರೂ, ಸರ್ಕಾರದ ದುಡ್ಡಲ್ಲಿ ಪೈಲಟ್ ವಾಹನ ಇಟ್ಟುಕೊಂಡು ಓಡಾಡುತ್ತಿರುವುದು ಯಾಕೆ. ಈ ರೀತಿ ಮಾಡವುದು ಸರಿಯಲ್ಲ ಎಂದರು.
ಈಶ್ವರಪ್ಪರಿಗೆ ಅಧಿಕಾರ ಹೋಗುತ್ತಿದ್ದಂತೆಯೇ ದುಬೈನಿಂದ ಬೆದರಿಕೆ ಕರೆ ಬರುತ್ತದೆ. ಅದು ಈವರೆಗೂ ಕಂಡು ಹಿಡಿಯಲು ಆಗಲಿಲ್ಲ. ಅವರಿಗೆ ಬೆದರಿಕೆ ಇದ್ದರೆ, ಗನ್ ಮ್ಯಾನ್ ಇಟ್ಟುಕೊಳ್ಳಲಿ. ಎಲ್ಲರಿಗೂ ನಾನು ಬರುತ್ತಿದ್ದೇನೆ ಎಂದು ತಿಳಿಯಲು ಪೈಲಟ್ ವಾಹನದೊಂದಿಗೆ ಬರುವುದು ಸರಿಯಲ್ಲ. ಅವರಿಗೆ ಬೆದರಿಕೆ ಇದ್ದರೆ ಯಾರಿಗೂ ತಿಳಿಯದಂತೆ ಗನ್ ಮ್ಯಾನ್ ಇಟ್ಟುಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.
Also read: ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪತ್ರಿಕಾ ವಿತರಕರನ್ನು ಪರಿಗಣಿಸಿ: ಜಿಲ್ಲಾಧಿಕಾರಿಗಳಿಗೆ ಮನವಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post