ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪುರದಾಳು ಗ್ರಾಮದಲ್ಲಿ ಕಾಡಾನೆ ಹಾವಳಿ #Wild elephant attack ಮುಂದುವರೆದಿದ್ದು, ಒಂಟಿ ಸಲಗವೊಂದು ರೈತರ ಅಡಿಕೆ ಹಾಗೂ ತೆಂಗಿನ ತೋಟವನ್ನು ನಾಶಪಡಿಸಿ ಕಾಡಿಗೆ ತೆರಳುತ್ತಿರುವ ದೃಶ್ಯ ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಗುರುವಾರ ಪುರದಾಳು ಸಮೀಪದ ಬೇಳೂರು ಗ್ರಾಮಕ್ಕೆ ಕಾಡಾನೆವೊಂದು ಎಂಟ್ರಿ ಕೊಟ್ಟಿದೆ. ಬೇಳೂರು ಬಳಿ ಒಂಟಿ ಸಲಗ ರೈತರ ತೋಟಕ್ಕೆ ನುಗ್ಗಿ ಅಡಿಕೆ-ತೆಂಗು ನಾಶ ಮಾಡಿದೆ.
ಕಾಡಾನೆ ಗ್ರಾಮದ ಸಮೀಪವೇ ಎಂಟ್ರಿ ಕೊಟ್ಟ ಹಿನ್ನೆಲೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















