ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲೆನಾಡಿನಲ್ಲಿ ಆನೆ ದಾಳಿ ಪ್ರಕರಣ ಮುಂದುವರೆದಿದ್ದು, ಶೆಟ್ಟಿಹಳ್ಳ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಪುರದಾಳು ಗ್ರಾಮದ ಜಮೀನಿಗೆ ಆನೆಗಳ ಹಿಂಡು ದಾಳಿ ನಡೆಸಿ ಬೆಳೆ ನಾಶಪಡಿಸಿರುವ ಘಟನೆ ನಡೆದಿದೆ.
ಕಳೆದೊಂದು ವಾರದಿಂದ ರೈತರ ಜಮೀನಿನ ಮೇಲೆ ಅನೆಗಳ ಹಿಡು ದಾಳಿ ನಡೆಸುತ್ತಿದ್ದು, ಹಿಲ್ಲೋಡಿ ವಸಂತ್ ಎಂಬುವರ ಜಮೀನಿನ ಮೇಲೆ ಕಾಡಾನೆ ದಾಳಿ ನಡೆಸಿ ಅಡಕೆ, ಬಾಳೆ ಗಿಡಗಳಿ ಹಾನಿ ಮಾಡಿವೆ ಎನ್ನಲಾಗಿದೆ.
ನಿರಂತರ ಮಳೆಯಿಂದಾಗಿ ಭತ್ತದ ಬೆಳೆಯನ್ನು ಕಳೆದುಕೊಂಡಿರುವ ರೈತರು, ಆನೆ ದಾಳಿಯಿಂದ ಅಡಕೆ, ಬಾಳೆ, ಭತ್ತ ಸೇರಿದಂತೆ ವಿವಿಧ ಬೆಳೆ ಮಣ್ಣು ಪಾಲಾಗುತ್ತಿದೆ. ಬೆಳೆಗಳ ನಾಶದಿಂದ ಅಪಾರ ಪ್ರಮಾಣದ ನಷ್ಟವಾಗಿದೆ. ಹಾಗೂ ಕಾಡಾನೆಗಳ ದಾಳಿಯಿಂದ ಸ್ಥಳೀಯ ರೈತರು ಕಂಗಾಲಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post