ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಿರಂತರ ಸಂಸ್ಥೆಯಿಂದ ವಿಭಿನ್ನವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಜೀವನ ನಿರ್ವಹಣೆಗಾಗಿ ಆಂಧ್ರದಿಂದ ಶಿವಮೊಗ್ಗಕ್ಕೆ ವಲಸೆ ಬಂದು ಮೆಗ್ಗಾನ್ ಆಸ್ಪತ್ರೆಯ ಕಾಂಪೌಂಡ್ ಎದುರು ಬುಟ್ಟಿ ಹಾಗೂ ಬಿದಿರಿನ ವಸ್ತುಗಳನ್ನು ತಯಾರಿಸಿ ಸ್ವಾಭಿಮಾನದಿಂದ ಬದುಕನ್ನು ಕಟ್ಟಿಕೊಂಡಿರುವ ಮಹಿಳೆಯರಿಗೆ ಪಾತ್ರೆ ಹಾಗೂ ದಿನಬಳಕೆ ವಸ್ತುಗಳನ್ನು ನೀಡುವ ಮೂಲಕ ನಿರಂತರ ಸಂಸ್ಥೆ ವತಿಯಿಂದ ವಿಭಿನ್ನವಾಗಿ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ನಿರಂತರ ಸಂಸ್ಥೆಯ ಸಂಸ್ಥಾಪಕರಾದ ಚೈತ್ರ ಸಜ್ಜನ್, ಸದಸ್ಯರಾದ ಸರೋಜಾ, ನಾಗರತ್ನ, ಹಾಲೇಶ್, ಹರ್ಷಿತ ಉಪಸ್ದಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post