ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೊರೋನಾ ಎರಡನೆಯ ಅಲೆಯ ಆತಂಕದ ನಡುವೆಯೇ ನಗರದ ಭೂಮಿ ಸಂಸ್ಥೆ, ಸಾರ್ಕ್, ಕಾಮನ್ ಮ್ಯಾನ್ ಸಂಸ್ಥೆ, ಮೃಗಾಲಯ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಸರಳವಾಗಿ ವಿಶ್ವ ಭೂಮಿ ದಿನಾಚರಣೆ ಆಚರಿಸಲಾಯಿತು.
ಭೂಮಿ ಮತ್ತು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಮಾದರಿ ಚಿತ್ರವನ್ನು ತಯಾರಿಸಿ, ಆಮ್ಲಜನಕದ ಬಳಕೆ, ಮರ-ಗಿಡ ಹಾಗೂ ಪರಿಸರ ಸಂರಕ್ಷಣೆ ಕುರಿತು ಮಾಹಿತಿ ನೀಡಲಾಯಿತು.
ಮೃಗಾಲಯ ವೀಕ್ಷಣೆಗೆ ಬರುವ ಸಾರ್ವಜನಿಕರಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮತ್ತು ಶುಚಿತ್ವದ ಬಗ್ಗೆ ಇದೇ ಸಂದರ್ಭದಲ್ಲಿ ಚರ್ಚಿಸಲಾಯಿತು.
ಭೂಮಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನವೀನ್ ತಲಾರಿ ಅವರು ಸಿಂಹ ಧಾಮ ವೀಕ್ಷಕರಿಗೆ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಹುಲಿ ಸಿಂಹ ಧಾಮದ ಶಿಕ್ಷಣಾಧಿಕಾರಿ ಇಜಾ, ಸಾರ್ಕ್ ಸಂಸ್ಥೆಯ ಪ್ರಸಾದ್, ಚಂದ್ರೋದಯ ಪತ್ರಿಕೆಯ ನಿತೀನ್ ತಲಾರಿ, ಸಾರ್ಕ್ ನಿರ್ದೇಶಕಿ ಮತ್ತು ಸಿಂಹ ಧಾಮದ ಸ್ವಯಂ ಸೇವಕರು, ಪರಿಸರ ಪ್ರೇಮಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post