ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತುಮಕೂರು ಮತ್ತು ಮಲ್ಲಸಂದ್ರ ನಿಲ್ದಾಣಗಳ ನಡುವೆ ಅಗತ್ಯ ಎಂಜಿನಿಯರಿಂಗ್ ಕಾಮಗಾರಿಗಳಾದ ಭೀಮಸಂದ್ರ ಲಿಮಿಟೆಡ್ ಹೈಟ್ ಸಬ್’ವೇನಲ್ಲಿ ಗಡರ್ ಬದಲಾವಣೆ, ಭೀಮಸಂದ್ರ ಮತ್ತು ಮುದ್ದಲಿಂಗನಹಳ್ಳಿ ಹಾಲ್ಟ್ ನಿಲ್ದಾಣಗಳಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಾಣ, ಹಾಗೂ ನಿಡವಂದ ಮತ್ತು ಹಿರೇಹಳ್ಳಿ ನಡುವಿನ ಲೆವೆಲ್ ಕ್ರಾಸಿಂಗ್-28 ರಲ್ಲಿನ ಕಾಮಗಾರಿಗಳಿಂದಾಗಿ, ಈ ಕೆಳಗೆ ವಿವರಿಸಿದಂತೆ ಕೆಲವು ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ, ಭಾಗಶಃ ರದ್ದುಗೊಳಿಸಲಾಗಿದೆ, ಮಾರ್ಗ ಬದಲಾಯಿಸಲಾಗಿದೆ, ನಿಯಂತ್ರಿಸಲಾಗಿದೆ ಮತ್ತು ಮರು-ವೇಳಾಪಟ್ಟಿ ಮಾಡಲಾಗಿದೆ.
ಪ್ರಮುಖವಾಗಿ ಡಿಸೆಂಬರ್ 17, 20, 21, 24ರಂದು 20652 ಸಂಖ್ಯೆಯ ತಾಳಗುಪ್ಪ-ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್ ರೈಲು ಅರಸೀಕೆರೆ ಮತ್ತು ಕೆಎಸ್’ಆರ್ ಬೆಂಗಳೂರಿನ ನಡುವೆ ಭಾಗಶಃ ರದ್ದಾಗಲಿದ್ದು, ಕೆಎಸ್’ಆರ್ ಬೆಂಗಳೂರಿನ ಬದಲಾಗಿ ಅರಸೀಕೆರೆಯಲ್ಲಿ ಸಂಚಾರವನ್ನು ಕೊನೆಗೊಳಿಸುತ್ತದೆ.
ಹಾಗೆಯೇ, ಡಿಸೆಂಬರ್ 17, 20, 21, 24ರಂದು ಪ್ರಯಾಣ ಆರಂಭಿಸುವ 16579 ಸಂಖ್ಯೆಯ ಯಶವಂತಪುರ-ಶಿವಮೊಗ್ಗ ಟೌನ್ ಎಕ್ಸ್’ಪ್ರೆಸ್ ಚಿಕ್ಕಬಾಣಾವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಇದು ತುಮಕೂರು ಮತ್ತು ತಿಪಟೂರು ನಿಲುಗಡೆಗಳನ್ನು ಇರುವುದಿಲ್ಲ.
ಅದೇ ರೀತಿಯಲ್ಲಿ ಡಿಸೆಂಬರ್ 17, 20, 21, 24ರಂದು 12725 ಸಂಖ್ಯೆಯ ಬೆಂಗಳೂರು-ಧಾರವಾಡ ಎಕ್ಸ್’ಪ್ರೆಸ್ ರೈಲು ಬೆಂಗಳೂರು ಮತ್ತು ಅರಸೀಕೆರೆಯ ನಡುವೆ ಭಾಗಶಃ ರದ್ದಾಗಲಿದ್ದು, ಬೆಂಗಳೂರಿನ ಬದಲಾಗಿ ಅರಸೀಕೆರೆಯಿಂದಲೇ ತನ್ನ ಸಂಚಾರವನ್ನು ಆರಂಭಿಸಲಿದೆ.
ಡಿಸೆಂಬರ್ 17 ಮತ್ತು 24ರಂದು, 12726 ಸಂಖ್ಯೆಯ ಧಾರವಾಡ- ಬೆಂಗಳೂರು ಎಕ್ಸ್’ಪ್ರೆಸ್ ರೈಲು ಅರಸೀಕೆರೆ ಮತ್ತು ಬೆಂಗಳೂರಿನ ನಡುವೆ ಭಾಗಶಃ ರದ್ದಾಗಲಿದ್ದು, ಬೆಂಗಳೂರಿನ ಬದಲಾಗಿ ಅರಸೀಕೆರೆಯಲ್ಲಿ ಸಂಚಾರವನ್ನು ಕೊನೆಗೊಳಿಸುತ್ತದೆ.
ಡಿಸೆಂಬರ್ 17 ಮತ್ತು 24 ರಂದು, 66571 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು-ತುಮಕೂರು ಮೆಮು ರೈಲು ದೊಡ್ಡಬೆಲೆ ಮತ್ತು ತುಮಕೂರಿನ ನಡುವೆ ಭಾಗಶಃ ರದ್ದಾಗಲಿದ್ದು, ತುಮಕೂರಿನ ಬದಲಾಗಿ ದೊಡ್ಡಬೆಲೆಯಲ್ಲಿ ಸಂಚಾರವನ್ನು ಕೊನೆಗೊಳಿಸುತ್ತದೆ.
ಡಿಸೆಂಬರ್ 17 ಮತ್ತು 24ರಂದು, 66568 ಸಂಖ್ಯೆಯ ತುಮಕೂರು- ಬೆಂಗಳೂರು ಮೆಮು ರೈಲು ತುಮಕೂರು ಮತ್ತು ದೊಡ್ಡಬೆಲೆಯ ನಡುವೆ ಭಾಗಶಃ ರದ್ದಾಗಲಿದ್ದು, ತುಮಕೂರಿನ ಬದಲಾಗಿ ದೊಡ್ಡಬೆಲೆಯಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ.
ಡಿಸೆಂಬರ್ 17 ಮತ್ತು 24ರಂದು, 56281 ಸಂಖ್ಯೆಯ ಚಾಮರಾಜನಗರ-ತುಮಕೂರು ಪ್ಯಾಸೆಂಜರ್ ರೈಲು ಚಿಕ್ಕಬಾಣಾವರ ಮತ್ತು ತುಮಕೂರಿನ ನಡುವೆ ಭಾಗಶಃ ರದ್ದಾಗಲಿದ್ದು, ತುಮಕೂರಿನ ಬದಲಾಗಿ ಚಿಕ್ಕಬಾಣಾವರದಲ್ಲಿ ಸಂಚಾರವನ್ನು ಕೊನೆಗೊಳಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















