ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿಮ್ಮ ಮಸೀದಿಗಳಲ್ಲಿ ನೀವು ಪ್ರಾರ್ಥನೆ ಮಾಡಿಕೊಳ್ಳಿ, ಬದಲಾಗಿ ನಮ್ಮ ದೇವಾಲಯಗಳ ತಂಟೆಗೆ ನೀವು ಬರಬೇಡಿ ಎಂದು ಮುಸ್ಲೀಮರ ವಿರುದ್ಧ ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ಗುಡುಗಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಮ್ಮಲ್ಲಿ ಒಡೆಯಲಾಗಿರುವ ೩೬ ಸಾವಿರ ದೇವಾಲಯಗಳು ನಮ್ಮ ದೇಶದ ಆಸ್ತಿ, ನಮ್ಮ ಪವಿತ್ರ ತೀರ್ಥ ಕ್ಷೇತ್ರಗಳು ಅವರು. ಅವುಗಳ ತಂಟೆಗೆ ಬರಬೇಡಿ. ಅವುಗಳನ್ನು ಕಾನೂನಾತ್ಮಕವಾಗಿಯೇ ಹಿಂಪಡೆಯುತ್ತೇವೆ. ನಿಮ್ಮ ಮಸೀದಿಗಳಲ್ಲಿ ನೀವು ಪ್ರಾರ್ಥನೆ ಮಾಡಿಕೊಳ್ಳಿ, ಬದಲಾಗಿ ನಮ್ಮ ದೇವಾಲಯಗಳ ತಂಟೆಗೆ ನೀವು ಬರಬೇಡಿ ಎಂದಿದ್ದಾರೆ.
ಮುಸಲ್ಮಾನರು ಇತ್ತೀಚೆಗೆ ಪರಿವರ್ತನೆಯಾಗುತ್ತಿದ್ದು, ನಾವೂ ಅವರ ಮನಸ್ಸನ್ನು ಬದಲಾಯಿಸುವ ಪ್ರಯತ್ನ ಮಾಡುತ್ತಿದ್ದೇವೆ. ಆದರೆ, ಕಾಂಗ್ರೆಸ್’ನ ತುಷ್ಟೀಕರಣ ರಾಜಕಾರಣದಿಂದ ಅವರು ದಾರಿ ತಪ್ಪುತ್ತಿದ್ದಾರೆ. ಮುಸ್ಲೀಮರು ಇದಕ್ಕೆ ಒಳಗಾಗಬಾರದು. ನೀವುಗಳು ಔರಂಗಜೇಬನ ಸಂತತಿಯಾಗಬೇಡಿ. ರಾಷ್ಟ್ರಭಕ್ತರಾಗಿ ದೇಶ ಕಾಪಾಡಲು ನಮ್ಮೊಂದಿಗೆ ಸಹಕರಿಸಿ ಎಂದು ಮನವಿ ಮಾಡಿದ್ದಾರೆ.
ದತ್ತಪೀಠದಲ್ಲಿ ಮಾಂಸಹಾರ ಸೇವೆನೆಗೆ ಕಿಡಿ
ದತ್ತಪೀಠದ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಪ್ರಾಣಿ ಬಲಿ ನೀಡಲು, ಮಾಂಸಹಾರ ಸೇವನೆ ಮಾಡಲು ಅವಕಾಶವಿಲ್ಲ. ಆದರೆ, ಮುಸ್ಲೀಮರು ಅಲ್ಲಿ ಮಾಂಸಹಾರ ಸೇವನೆ ಮಾಡುವ ಮೂಲಕ ನಿಯಮ ಉಲ್ಲಂಘಿಸುವ ಜೊತೆಯಲ್ಲಿ ಅಪವಿತ್ರ ಮಾಡಿದ್ದಾರೆ ಎಂದು ಕಿಡಿ ಕಾರಿದರು.
ಈ ಘಟನೆ ಕುರಿತಾಗಿ ಕಾಂಗ್ರೆಸ್’ನ ಯಾವುದೇ ನಾಯಕರು ಮಾತನಾಡಿಲ್ಲ. ಕೈ ಮುಖಂಡರು ಈಗ ಬಾಯಲ್ಲಿ ಕಡುಬು ಇರಿಸಿಕೊಂಡಿದ್ದಾರ ಎಂದು ಪ್ರಶ್ನಿಸಿದರು.
Also read: ರಾಮನ ಅಯೋಧ್ಯೆ, ಕೃಷ್ಣನ ಮಥುರಾ, ಈಶ್ವರನ ಕಾಶಿಯನ್ನು ನಮಗೆ ಕೊಟ್ಟುಬಿಡಿ: ಈಶ್ವರಪ್ಪ ಹೇಳಿಕೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post