ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಸಮಾಜಕ್ಕೆ ಯಾವುದೇ ರೀತಿಯ ಸಹಾಯ ಮಾಡಲು ನಮ್ಮ ಯುವ ಸಮೂಹ ಸನ್ನದ್ದರಾಗಬೇಕಿದೆ. ಯುವಕರು ಒಗ್ಗಟಾದಲ್ಲಿ ಸಮಾಜದಲ್ಲಿ ಅದ್ಭುತವಾದ ಬದಲಾವಣೆಗಳನ್ನು ತರಲು ಸಾಧ್ಯವಿದೆ ಎಂದು ಕುವೆಂಪು ವಿಶ್ವವಿದ್ಯಾಲಯ ಎನ್’ಎಸ್’ಎಸ್ ಸಂಯೋಜನಾಧಿಕಾರಿ ಡಾ.ನಾಗರಾಜ ಪರಿಸರ ಹೇಳಿದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಇಂದು ನಗರದ ಎಸ್.ಆರ್. ನಾಗಪ್ಪ ಶೆಟ್ಟಿ ಸ್ಮಾರಕ ಅನ್ವಯಿಕ ವಿಜ್ಞಾನ ಕಾಲೇಜಿನ ಎನ್’ಎಸ್’ಎಸ್ ಘಟಕ, ರೆಡ್ ಕ್ರಾಸ್ ಮತ್ತು ಶಂಕರ ಕಣ್ಣಿನ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ನೇತ್ರದಾನ ಜಾಗೃತಿ ಮತ್ತು ಪ್ರತಿಜ್ಞಾ ವಿಧಿ ಬೋಧನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅತ್ಯಮೂಲ್ಯವಾದ ನಮ್ಮ ಶರೀರದ ಅಂಗಾಗಳ ದಾನ ಮಾಡುವುದರ ಮೂಲಕ ಬದುಕಿನ ಸಾರ್ಥಕತೆ ಪಡೆಯಬಹುದಾಗಿದೆ. ಮತ್ತೋರ್ವರ ಬಾಳಿನ ಬೆಳಕಾಗುವ ಕಾರ್ಯ ನೇತ್ರದಾನದಿಂದ ಸಾಧ್ಯವಾಗಲಿದೆ. ಸಮಾಜಕ್ಕೆ ಯಾವುದೇ ರೀತಿಯ ಸಹಾಯ ಮಾಡಲು ನಮ್ಮ ಯುವ ಸಮೂಹ ಸನ್ನದ್ದರಾಗಬೇಕಿದೆ. ಯುವಕರು ಒಗ್ಗಟಾದಲ್ಲಿ ಸಮಾಜದಲ್ಲಿ ಅದ್ಭುತವಾದ ಬದಲಾವಣೆಗಳನ್ನು ತರಲು ಸಾಧ್ಯವಿದೆ. ಸ್ವತಂತ್ರ ಹೋರಾಟದಲ್ಲಿ ಸಾಕಷ್ಟು ಹೋರಾಟಗಾರರ ಶ್ರಮ ಅವಿಸ್ಮರಣೀಯ. ಈ ಹಿನ್ನಲೆಯಲ್ಲಿ ಅಜಾದಿ ಕ ಅಮೃತ್ ಮಹೋತ್ಸವ ಮೂಲಕ ಅಂತಹ ಹೋರಾಟಗಾರರಿಗೆ ವರ್ಷ ಪೂರ್ತಿ ಗೌರವಿಸುವ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್.ಆರ್.ಎನ್.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಎಲ್. ಅರವಿಂದ ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆಯ ಕಾರ್ನಿಯ ತಜ್ಞೆ ಡಾ.ರಕ್ಷಿತಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಡಾ.ಎಸ್. ಮುಕುಂದ, ರೆಡ್ ಕ್ರಾಸ್ ಅಧಿಕಾರಿ ಡಾ. ಪ್ರಶೀತ್ ಕೇಕುಡ, ಎನ್.ಜೆ. ಮುಕ್ತ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post