ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿನೋಬನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಎಪಿಎಂಸಿ ಯಾರ್ಡ್ ನ ಪ್ರಿಯಾಂಕಾ ಲೇ-ಔಟ್’ನಲ್ಲಿ ಯುವಕನ ಮೇಲೆ ಆಯುಧಗಳಿಂದ ಇರಿಯಲಾಗಿದ್ದು ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವಾಗಿರುವ ಘಟನೆ ನಡೆದಿದೆ.
ತಾಲೂಕಿನ ಬನ್ನಕೋಡು ಗ್ರಾಮದ ಜನಾರ್ಧನ (26) ಎಂಬ ಯುವಕನ ಮೇಲೆ ಹನುಮಂತ ಎಂಬ ವ್ಯಕ್ತಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾನೆ. ತೀವ್ರ ಇರಿತಕ್ಕೊಳಗಾದ ಯುವಕನನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಗಾಯಗೊಂಡಿದ್ದ ಹನುಮಂತುವಿಗೆ ಸೂಕ್ತ ಚಿಕಿತ್ಸೆಯಾಗಲಿ ಅಥವಾ ಪರಿಹಾರ ನೀಡಿಲ್ಲ ಎಂಬ ಕಾರಣಕ್ಕೆ ಹನುಮಂತು ಜನಾರ್ಧನ ಮೇಲೆ ದ್ವೇಷ ಕಾರುತ್ತಿದ್ದ ಎನ್ನಲಾಗಿದೆ. ನಿನ್ನೆ ಇದೇ ವಿಚಾರಕ್ಕೆ ಆಯುಧಗಳಿಂದ ಇರಿದಿರುವ ಶಂಕೆ ವ್ಯಕ್ತವಾಗಿದೆ.
ಜಗನ್ನಾಥ ಮತ್ತು ಹನುಮಂತು ಇಬ್ಬರೂ ಸಂಬಂಧಿಗಳಾಗಿದ್ದಾರೆ. ಸಂಬಂಧದಲ್ಲಿ ಇಬ್ವರೂ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳು ಎನ್ನಲಾಗುತ್ತಿದೆ. ಹನುಮಂತು ಅವರನ್ನ ನಿನ್ನೆ ರಾತ್ರಿಯೇ ವಿನೋಬನಗರ ಪೊಲೀಸರು ವಶಕ್ಕೆ ಪಡೆದಿದ್ದರು. ಮೃತದೇಹವನ್ನ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post