ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಿಹಿಮೊಗೆ ಎಂದರೆ ಸಂಭ್ರಮವಾಗಿದ್ದು, ಇಲ್ಲಿ ನಿರಂತರವಾಗಿ ಸಾಂಸ್ಕøತಿಕ ಕಲರವ ಮತ್ತು ಸಾಮಾಜಿಕ ಚಟುವಟಿಕೆ ನಡೆಯುತ್ತಿದ್ದು, ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಶಿವಮೊಗ್ಗದ ಯುವಶಕ್ತಿ ಸಕ್ರೀಯವಾಗಿದೆ ಎಂದು ಖ್ಯಾತ ಸಾಹಿತಿ ಗಜಾನಂದ ಶರ್ಮಾ ಹೇಳಿದ್ದಾರೆ.
ಅವರು ನಗರದ ಸುವರ್ಣ ಸಂಸ್ಕøತಿ ಭವನದಲ್ಲಿ ಸಿಹಿಮೊಗೆ ಸಂಭ್ರಮ-2 ಅಂಗವಾಗಿ ಮಲೆನಾಡಿನ ಸಾಂಸ್ಕøತಿಕ ವೈಭವದ ನೃತ್ಯಹಬ್ಬವಾದ ನರ್ತನ ಸಂಭ್ರಮ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಸ್ವಾಮಿ ವಿವೇಕಾನಂದರು ವಿದೇಶಕ್ಕೆ ತೆರಳಿದಾಗ ಮೈಸೂರಿನ ಮಹಾರಾಜರು ಅವರಿಗೆ ನೆರವು ನೀಡಿದ್ದರು. ಅಲ್ಲಿಂದ ಅವರು ರಾಜರಿಗೆ ಪತ್ರಬರೆದು ಅಮೇರಿಕಾದಲ್ಲಿ ಮಹಿಳೆಯರಿಗೆ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನವಿದ್ದು, ಇಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಸಾಧನೆ ಮಾಡಿದ್ದಾರೆ ಎಂದರು ತಿಳಿಸಿದ್ದರು.
ನಾವು ಈಗ ವಿವೇಕಾನಂದರ ಕನಸಿನ ಜೊತೆಗೆ ಸಾಗುತ್ತಿದ್ದು, ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಯುವಶಕ್ತಿಯನ್ನು ಜೊತೆಗೆ ಕರೆದುಕೊಂಡು ಹೋಗಬೇಕಾಗಿದೆ. ಹೊಸನಾಡು ಕಟ್ಟಲು ಯುವಶಕ್ತಿ ಮುಂದೆಬರಬೇಕು. ಈ ನಿಟ್ಟಿನಲ್ಲಿ ಜಾಗೃತಗೊಳಿಸಲು ಅನವರತ ಸಂಸ್ಥೆ ನಿರಂತರ ಕೆಲಸ ಮಾಡುತ್ತಿದೆ ಎಂದರು.
ಇದು ಸ್ಪರ್ಧಾತ್ಮಕ ಜಗತ್ತು. ಸ್ಫರ್ಧೆ ಎಂದರೆ ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ. ಸ್ಫರ್ಧೆಯ ಮೂಲಕ ನಮ್ಮ ಗುಣಾತ್ಮಕ ಅಂಶಗಳನ್ನು ಪ್ರಕಟಿಸಬಹುದಾಗಿದೆ. ಸಾಧನೆ ಮಾಡುತ್ತಾ ಹೋಗಬೇಕು. ಒಂದು ಸೋಲು ನಿರಂತರ ಸೋಲು ಅಲ್ಲ, ಸೋಲೇ ಗೆಲುವಿನ ಮೊದಲ ಮೆಟ್ಟಿಲು. ಸ್ಪರ್ಧೆಗೆ ಬಂದವರೆಲ್ಲಾ ವಿಜಯಿಗಳೇ ಎಂದು ಭಾವಿಸಿ ಧನಾತ್ಮಕವಾಗಿ ತೆಗೆದುಕೊಂಡು ದೇಶಕ್ಕೆ ಕೀರ್ತಿತರುವ ಸಾಧನೆ ಮಾಡಿರಿ ಎಂದು ಹಾರೈಸಿದರು.
ಅನವರತ ಪೌಂಡೇಷನ್‍ನ ಟ್ರಸ್ಟಿ ಶಿವಕುಮಾರ್ ಅವರು ಸಂಸ್ಥೆ ನಡೆಸಿದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಅಧ್ಯಕ್ಷತೆಯನ್ನು ಶಾಸಕರು, ಸಂಸ್ಥೆಯ ಗೌರವಾಧ್ಯಕ್ಷರಾದ ಎಸ್.ಎನ್. ಚನ್ನಬಸಪ್ಪ ವಹಿಸಿದ್ದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಸ್. ಜ್ಞಾನೇಶ್ವರ್, ಆರ್‍ಎಸ್‍ಎಸ್ ಮುಖಂಡ ಗಿರೀಶ್ ಕಾರಂತ್ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















