ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜನಿವಾರ #Janiwara ಧರಿಸಿದ್ದ ಕಾರಣಕ್ಕಾಗಿ ಸಿಇಟಿ ಪರೀಕ್ಷೆಗೆ #CET Exam ಅವಕಾಶ ವಂಚಿತಗೊಂಡ ವಿದ್ಯಾರ್ಥಿಗೆ ಮರು ಪರೀಕ್ಷೆಗೆ ಅವಕಾಶ ಕಲ್ಪಿಸಿ ಕೊಡಬೇಕು ಎಂದು ಬಿಜೆಪಿ ಹಾಗೂ ಬ್ರಾಹ್ಮಣ ಸಮಾಜದ ಪ್ರಮುಖ ಎಸ್. ದತ್ತಾತ್ರಿ ಆಗ್ರಹಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಸರ್ಕಾರದ ನೀತಿ ಹಾಗೂ ಅಧಿಕಾರಿಗಳ ಧೋರಣೆಯನ್ನು ಖಂಡಿಸಿದ್ದಾರೆ.
ಸನಾತನ ಪರಂಪರೆ ಹಾಗೂ ವಿಪ್ರ ಸಮುದಾಯದಲ್ಲಿ ಯಜ್ಞೋಪವೀತಕ್ಕೆ ಪವಿತ್ರ ಸ್ಥಾನವಿದೆ. ಗಾಯತ್ರಿ ಮಂತ್ರದ ದೀಕ್ಷೆ ಹಾಗೂ ಜನಿವಾರದ ಪ್ರಾಮುಖ್ಯತೆ ತಿಳಿಯದ ದುರುದ್ದೇಶ ಹಾಗೂ ಪೂರ್ವಗ್ರಹ ಪೀಡಿತ ಅಧಿಕಾರಿಗಳು ಅದನ್ನು ತೆಗೆಸಿ, ನಮ್ಮ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಇದು ಅಕ್ಷಮ್ಯ ಅಪರಾಧವಾಗಿದೆ ಇಂದು ಖಂಡಿಸಿದ್ದಾರೆ.
ಇಂತಹ ಹೀನ ಕೃತ್ಯ ಎಸಗಿರುವ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಬೇಕು, ರಾಜ್ಯ ಸರ್ಕಾರ ಸಮಸ್ತ ವಿಪ್ರ ಸಮುದಾಯದ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಮುಖವಾಗಿ, ವರ್ಷಗಟ್ಟಲೆ ಕಷ್ಟಪಟ್ಟು ಓದಿದ ವಿದ್ಯಾರ್ಥಿಗೆ ಇದರಿಂದ ಭವಿಷ್ಯಕ್ಕೆ ಪೆಟ್ಟು ಬಿದ್ದಿದೆ. ಹೀಗಾಗಿ, ಅವಕಾಶ ವಂಚಿತ ವಿದ್ಯಾರ್ಥಿಗೆ ಮರು ಪರೀಕ್ಷೆಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post