ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂವಿಧಾನ ವ್ಯವಸ್ಥೆಯಿಂದ ಎಲ್ಲರಿಗೂ ಅವಕಾಶ ಸಿಗುತ್ತಿದ್ದು, ಉತ್ತಮ ಸಮಾಜ ರೂಪುಗೊಳ್ಳುವಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅಪಾರ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕುರಿತು ಹೆಚ್ಚಿನ ಅಧ್ಯಯನ ನಡೆಸಬೇಕು. ಅವರ ಕೃತಿಗಳನ್ನು ಯುವಜನತೆ ಅಧ್ಯಯನ ನಡೆಸಬೇಕು ಎಂದು ಭಾರತ ಸ್ಕೌಟ್ ಅಂಡ್ ಗೈಡ್ಸ್ ನ ಜಿಲ್ಲಾ ಗೈಡ್ ಆಯುಕ್ತರಾದ ಶಕುಂತಲಾ ಚಂದ್ರಶೇಖರ್ ತಿಳಿಸಿದರು.
ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ #Dr. B.R. Ambedkar 133ನೇ ಜಯಂತಿ ಅಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಭಾರತದಲ್ಲಿನ ಬಹುತ್ವವುಳ್ಳ ಸಮಾಜದಲ್ಲಿ ಹೆಚ್ಚಿನವರು ಎಲ್ಲ ಕ್ಷೇತ್ರಗಳಲ್ಲಿ ಅಸಮಾನತೆಯಿಂದ ಬಳಲುತ್ತಿದ್ದರು. ಇಂತಹ ಕಾಲಘಟ್ಟದಲ್ಲಿ ಶೋಷಿತ ವರ್ಗದ ಧ್ವನಿಯಾಗಿದ್ದ ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದAತ ಶ್ರೇಷ್ಠ ಗ್ರಂಥವನ್ನು ರಚಿಸಿ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದ ಮಹಾನ್ ನಾಯಕ. ಲಂಡನ್‌ನಲ್ಲಿ ಅಧ್ಯಯನ ನಡೆಸಿದ ಅವರು ನಂತರ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಂಡರು. ಸಮಸಮಾಜದ ಕನಸು ಕಂಡAತಹ ಅಂಬೇಡ್ಕರ್ ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದರು ಎಂದು ಹೇಳಿದರು.
Also read: ಕಾಗೋಡು ತಿಮ್ಮಪ್ಪ ನಿವಾಸಕ್ಕೆ ಗೀತಾ ಶಿವರಾಜಕುಮಾರ್ ಭೇಟಿ
ಸ್ಕೌಟ್ ಆಯ್ತ್ರಾದ ಕೆಪಿ ಬಿಂದು ಕುಮಾರ್ ಮಾತನಾನಾಡಿ, ಎಲ್ಲಾ ದೇಶದ ಸಂವಿದಾನ ಕ್ಕಿಂತ ನಮ್ಮ ದೇಶದ ಸಂವಿಧಾನ ತುಂಬಾ ವಿಶೇಷವಾದದ್ದು ಅಂಬೇಡ್ಕರ್ ಅವರ ತತ್ವ ಆದರ್ಶ ಗುಣಗಳು ಹಾಗೂ ಆಡಳಿತಾತ್ಮಕ ಧೋರಣೆಯನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಮಕ್ಕಳಿಂದ ಸ್ಕೌಟ್ ಪ್ರಾರ್ಥನೆ ನೆರವೇರಿತು. ಕಾರ್ಯಕ್ರಮದಲ್ಲಿ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭಾರತಿ ಡಯಾಸ್. ಕೇಂದ್ರ ಸ್ಥಾನಿಕ ಆಯುಕ್ತ ಜಿ. ವಿಜಯ್‌ಕುಮಾರ್, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ರಾಜೇಶ್ ಅವಲಕ್ಕಿ. ಖಜಾಂಚಿ ದೀಪು ಪಿ ಎಸ್. ಹಿರಿಯ ಗೈಡರ್ಸ್. ಹೇಮಲತಾ. ಮೀನಾಕ್ಷಮ್ಮ. ಜಯಮ್ಮ. ದಾಕ್ಷಾಯಿಣಿ. ಹಿರಿಯ ಸ್ಕೌಟ್ ಮಾಸ್ಟರ್. ರಾಜಕುಮಾರ್. ಹಿರಿಯ ಸ್ಕೌಟರ್ಸ್.. ಚಂದ್ರಶೇಖರಯ್ಯ. ಎನ್ ಆರ್ ಚಂದ್ರಶೇಖರ್. ಮಲ್ಲಿಕಾರ್ಜುನ್ ಖಾನೂರ್. ಜಿಲ್ಲಾ ಸಂಸ್ಥೆಯ ಕೇಂದ್ರ ಕಚೇರಿಯ ಸಿಬ್ಬಂದಿಗಳು. ವಿವಿಧ ಶಾಲೆಯ ಸ್ಕೌಟ್ ಕ್ಲಬ್ ಗೈಡ್ ಬುಲ್ ಬುಲ್, ರೋವರ್ಸ್ ರೆಂಜರ್ಸ್ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post