ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಮಾಜವನ್ನು ಪತ್ರಿಕೋದ್ಯಮ ಸದಾ ಎಚ್ಚರಿಸುವ ಕೆಲಸ ಮಾಡುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ #MP Raghavendra ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆ ವತಿಯಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಭಾಗಿತ್ವದಲ್ಲಿ ಇಂದು ನಗರದ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾದಿನಾಚರಣೆಯ, ಪ್ರತಿಭಾ ಪುರಸ್ಕಾರ ಸಾಧಕ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಿಕೆಗಳು ಈಗ ಹೆಚ್ಚಾಗಿವೆ. ಸಿದ್ದಾಂತ ವಿಚಾರಧಾರೆಗಳು ಬೇರೆಯಾದರು ಸತ್ಯಾಸತ್ಯತೆಯನ್ನು ಸಮಾಜಕ್ಕೆ ತಿಳಿಸಬೇಕು. ಸಮಾಜವನ್ನು ಎಚ್ಚರಿಸಬೇಕು. ವಿಚಾರಗಳ ಬಗ್ಗೆ ಚರ್ಚಿಸಬೇಕು ಎಂದು ಹೇಳಿದರು.
ತಂದೆ ಬಿ.ಎಸ್.ಯಡಿಯೂರಪ್ಪ ಪ್ರತಿದಿನ ಬೆಳಿಗ್ಗೆ ದಿನಪತ್ರಿಕೆ ಓದುವುದರೊಂದಿಗೆ ದಿನಚರಿ ಆರಂಭಿಸುತ್ತಾರೆ. ಎಷ್ಟೇ ವಾಹಿನಿಗಳು ಇದ್ದರು ಸುದ್ದಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಬಂದರು ಬಹುತೇಕರಿಗೆ ದಿನಪತ್ರಿಕೆ ಓದುವುದರಿಂದ ಸಮಧಾನ ಸಿಗುತ್ತದೆ ಎಂದು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ, ಅಂಬೇಡ್ಕರ್ ನೀಡಿರುವ ಸಂವಿಧಾನ, ಇತಿಹಾಸ ಇವುಗಳ ಕುರಿತು ಸಮಾಜಕ್ಕೆ ಎಚ್ಚರಿಸುವ, ತಿಳಿಸುವ ಕೆಲಸವನ್ನು ಪತ್ರಕರ್ತರು ಮಾಡಲು ದಿಟ್ಟ ಹೆಜ್ಜೆ. ಯಾವುದೇ ಸವಾಲುಗಳು ಬಂದರೂ ಕೂಡ ದಿಟ್ಟವಾಗಿ ಎದುರಿಸುವಂತಹ ಕೆಲಸವನ್ನು ಪತ್ರಕರ್ತರು ಮಾಡಿದ್ದಾರೆ. ವಿಶೇಷವಾದ ಲೇಖನಿ ಮೂಲಕ ರಾಷ್ಟ್ರವನ್ನು ತಿದ್ದುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ನಮ್ಮ ಪತ್ರಿಕಾ ಮಾಧ್ಯಮಗಳ ಲೇಖನಗಳು ಜನರಿಗೆ ಇವತ್ತಿಗೂ ಕೂಡ ಆಗಬೇಕಾಗಿದೆ. ಅದರ ಸಮಾಧಾನಕರ ತೃಪ್ತಿ ಈಗೀನ ಸಾಮಾಜಿಕ ಜಾಲತಾಣಗಳಲ್ಲಿ ಸಿಗುವುದಿಲ್ಲ. ಪತ್ರಿಕೆ ಯಾವತ್ತಿಗೂ ಹಳೆಯದಾಗಲೂ ಸಾಧ್ಯವಿಲ್ಲ. ನಿಮ್ಮ ಲೇಖನಿ ಸಿದ್ಧಾಂತಗಳು ಬೇರೆ ಬೇರೆ ಇದ್ದರು ಸಹ ಸತ್ಯಾ ಸತ್ಯಾತತೆಯನ್ನು ತಿಳಿಸುವ ಕೆಲಸವನ್ನು ಮಾಡಬೇಕು. ಗಾಂಧೀಜಿ, ನೆಹರೂ ಸೇರಿದಂತೆ ಹಲವರು ಪತ್ರಕರ್ತರಿದ್ದಾರೆ. ಸತ್ಯಾಸತ್ಯತೆಯನ್ನು ಸಮಾಜಕ್ಕೆ ತಿಳಿಸುವ ಕೆಲಸ ಇನ್ನೂ ಆಗಬೇಕಿದೆ. ಂಚಿ ನಿಟ್ಟಿನಲ್ಲಿ ನಿಮ್ಮ ಲೇಖನಗಳು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಆಗಲಿ. ಸಮಾಜದಲ್ಲಿ ನೀವು ಒಬ್ಬಂಟಿಯಲ್ಲ, ನಿಮ್ಮ ಜೊತೆ ಸರ್ಕಾರ ಇರುತ್ತದೆ ಎಂದು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ 1988 ರಲ್ಲಿ ಸ್ಥಾಪನೆಯಾಗಿದೆ. ಪತ್ರಕರ್ತರಿಂದ ನಿರಂತರ ಚಟುವಟಿಕೆ ಆಗುತ್ತಿದೆ. ತುಂಬಾ ಅನೇಕ ಸಮಯಗಳಲ್ಲಿ ಹೋರಾಟ ಮಾಡಿದ್ದೇವೆ. ಪತ್ರಕರ್ತರ ಕ್ಷೇಮಾಭಿವೃದ್ಧಿ ದೃಷ್ಟಿಯಲ್ಲಿ ಮೊದಲ ಆದ್ಯತೆ ನೀಡಲಾಗಿದೆ. ಅಪತ್ಬಾಂಧವ ಮೂಲಕ ಪ್ರತಿ ತಿಂಗಳು ರೂ.50,000 ಜೋಡಣೆ ಆಗುತ್ತಿದೆ ಎಂದರು.
ಕ್ಷೇಮಾಭಿವೃದ್ಧಿ ನಿಧಿ ನಾವು ಬಂದಾಗ ಶೂನ್ಯ ಇತ್ತು ಈಗ ಒಂದು ಕೋಟಿ ಹಣ ಕ್ರೀಡೀಕರಣ ಆಗಿದೆ. ಇದರಿಂದ ಪತ್ರಕರ್ತರ ಅನಾರೋಗ್ಯದ ಸಮಸ್ಯೆಯಲ್ಲಿ ಬಳಕೆ ಮಾಡಲಾಗುತ್ತದೆ. ಈ ಸಂಘಟನೆ ವಿಶ್ವಾಸಾರ್ಹ ಸಂಘಟನೆಯಾಗಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post