ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಚಂದನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಒಂದು ದೇಶ, ಒಂದು ಚುನಾವಣೆ” #One Country One Election ಕುರಿತು ನಡೆದ ವಿಚಾರ ಸಂಕಿರಣ ಕಾರ್ಯಾಗಾರವನ್ನು ವಿಧಾನ ಪರಿಷತ್ ಮಾಜಿ ಶಾಸಕರು ಹಾಗೂ ಭಾರತೀಯ ಸೇನೆಯ ನಿವೃತ್ತ ಕ್ಯಾಪ್ಟನ್ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉದ್ಘಾಟಿಸಿ ಮಾತನಾಡಿದರು.
ಒಂದು ದೇಶ, ಒಂದು ಚುನಾವಣೆ ಎಂದರೆ ಭಾರತದ ಎಲ್ಲ ಚುನಾವಣೆಗಳನ್ನು ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನೂ ಒಂದೇ ಸಮಯದಲ್ಲಿ ನಡೆಸುವುದು. ಇದು ಒಂದು ಸಮಗ್ರ, ಸಂಘಟಿತ ಮತದಾನ ಕ್ರಮವನ್ನು ಉದ್ದೇಶಿಸಿದೆ ಎಂದು ತಿಳಿಸಿದರು.
ನಿರಂತರ ಚುನಾವಣೆಗಳಿಂದ ಉಂಟಾಗುವ ಹಣ ಮತ್ತು ಸಮಯದ ನಷ್ಟವನ್ನು ತಪ್ಪಿಸುವುದು. ಸರ್ಕಾರದ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು. ಜನತೆಗೆ ಸ್ಪಷ್ಟತೆ ಮತ್ತು ದೃಢತೆಯುಳ್ಳ ಆಡಳಿತ ನೀಡುವುದು. ಚುನಾವಣೆ ನೀತಿ ಸಂಹಿತೆಯಿಂದ ಪ್ರಭಾವಿತರಾಗುವ ಸರ್ಕಾರದ ನಿರ್ಣಯಗಳನ್ನು ತಪ್ಪಿಸುವುದು. ಹಣದ ಉಳಿತಾಯ ಪ್ರತಿ ಚುನಾವಣೆಗಳಿಗೆ ಸಾವಿರಾರು ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಒಂದೇ ಚುನಾವಣೆಯಾದರೆ ಈ ಹಣ ಉಳಿಯುತ್ತದೆ. ಸಮಯದ ಉಳಿತಾಯ ಬೃಹತ್ ಮಾನವ ಸಂಪನ್ಮೂಲ ಮತ್ತು ಶಕ್ತಿಯನ್ನು ಒಟ್ಟಿಗೆ ಬಳಸಬಹುದು. ಆಡಳಿತದಲ್ಲಿ ಸ್ಥಿರತೆ, ಸರ್ಕಾರ ನಿರಂತರವಾಗಿ ಕೆಲಸ ಮಾಡಬಹುದು. ಜನರ ನಂಬಿಕೆ ಹೆಚ್ಚುವುದು ನಿರ್ಧಾರಗಳು ತ್ವರಿತವಾಗಿ ತೆಗೆದುಕೊಳ್ಳಬಹುದು.
ಒಂದು ದೇಶ, ಒಂದು ಚುನಾವಣೆ ಎಂಬುದು ನಿಜಕ್ಕೂ ಆಸಕ್ತಿದಾಯಕ ಮತ್ತು ಮುನ್ನೋಟದ ಆಲೋಚನೆಯಾಗಿದೆ. ಇದು ನಮ್ಮ ರಾಷ್ಟ್ರಕ್ಕೆ ಸುಧಾರಿತ ಆಡಳಿತವನ್ನು ತರಬಹುದು. ಜವಾಬ್ದಾರಿಯುತ ಪ್ರಜಾಪ್ರಭುತ್ವದ ದಿಕ್ಕಿನಲ್ಲಿ ಇದು ಒಂದು ಹೆಜ್ಜೆಯಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಶಾಸಕ ಡಿ.ಎಸ್. ಅರುಣ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲಾರದ ಪೆÇ್ರ.ಮಮತಾ ಅವರು, ಕಾರ್ಯಕ್ರಮ ಸಂಚಾಲಕರಾದ ಗಾಯಿತ್ರಿ, ಕಾರ್ಯಕ್ರಮ ಆಯೋಜಕರಾದ ರವಿಕಿರಣ್ ಹಾಗೂ ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post