ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರತಿ 43 ಸೆಕೆಂಡಿಗೆ ಒಬ್ಬರಂತೆ ವಿಶ್ವದಲ್ಲಿ ದಿನಕ್ಕೆ 7,20,000 ಜನರು ಆತ್ಮಹತ್ಯೆಗೆ #Suicide ಬಲಿಯಾಗುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ೧೫ ರಿಂದ 29 ವರ್ಷದೊಳಗಿನ ಯುವಪೀಳಿಗೆ ಇದರಲ್ಲಿ ಹೆಚ್ಚಾಗಿದ್ದಾರೆ ಎಂದು ಕ್ಲಿನಿಕಲ್ ಸೈಕಾಲಜಿಸ್ ಶಿಲ್ಪಾ ಹೇಳಿದರು.
ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಅಂಗವಾಗಿ ನಗರದ ಮಾನಸ ಟ್ರಸ್ಟ್‌ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಮನೋವಿಜ್ಞಾನ ವಿಭಾಗದಿಂದ ಆಯೋಜಿಸಲಾಗಿದ್ದ ಆತ್ಮಹತ್ಯೆಗೆ ಕಾರಣ ಮತ್ತು ಅದನ್ನು ತಡೆಗಟ್ಟುವ ಕ್ರಮದ ಬಗ್ಗೆ ಉಪನ್ಯಾಸ ನೀಡಿದರು.

ನಿರುದ್ಯೋಗ, ಲವ್ ಫೈಲ್ಯೂರು, ಮಾನಸಿಕ ಒತ್ತಡ, ಕುಟುಂಬದಲ್ಲಿ ಕಲಹ, ಮುಂತಾದವುಗಳಿಂದಲೂ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ರೀತಿಯ ಆತ್ಮಹತ್ಯೆಗಳನ್ನು ತಡೆಗಟ್ಟಲು ಕುಟುಂಬ ಹಾಗೂ ಸ್ನೇಹಿತರು ಕ್ರಮಕೈಗೊಳ್ಳಬೇಕು. ಮುಖ್ಯವಾಗಿ ಮನೋವಿಜ್ಞಾನಿಗಳು ಅಂತಹವರನ್ನು ವೀಕ್ಷಿಸಿ ಅವರಿಗೆ ಉತ್ತಮ ಆಪ್ತಸಮಾಲೋಚನೆ ನೀಡಬೇಕೆಂದು ತಿಳಿಸಿದರು.

ಆತ್ಮಹತ್ಯೆ ತಡೆಗಟ್ಟಲು ಸಮಾಜದಲ್ಲಿ ಮಾನಸಿಕ ಆರೋಗ್ಯದ ಕುರಿತು ಅರಿವು ಮೂಡಿಸಿ ಅದು ದುರ್ಬಲತೆ ಅಲ್ಲ ಎಂಬ ಸಂದೇಶ ನೀಡಬೇಕು ಅಲ್ಲದೆ, ತೊಂದರೆಗೀಡಾದವರಿಗೆ ಕೌನ್ಸೆಲಿಂಗ್ ಹಾಗೂ ವೈದ್ಯರ ನೆರವು ದೊರಕಿಸುವ ಪ್ರಯತ್ನ ಮಾಡಲು ಯತ್ನಿಸಬೇಕು. ಅವರಿಗೆ ಒಂಟಿತನ ಉಂಟಾಗದಂತೆ ನೋಡಿಕೊಳ್ಳಬೇಕು, ಅಷ್ಟೇ ಅಲ್ಲದೆ ಕುಟುಂಬ ಹಾಗೂ ಸ್ನೇಹಿತರು ಭಾವನಾತ್ಮಕ ಬೆಂಬಲ ನೀಡಿ ಮಾದಕ ವಸ್ತುಗಳಾದ ಮದ್ಯಪಾನ, ಧೂಮಪಾನ ಹಾಗೂ ಇತರೆ ಮಾದಕ ವಸ್ತುಗಳಿಂದ ದೂರ ಇರುವಂತೆ ನೋಡಿಕೊಳ್ಳಬೇಕು, ಆತ್ಮಹತ್ಯೆಯ ಬಗ್ಗೆ ಯೋಚಿಸಲು ಅವಕಾಶ ಇಲ್ಲದಂತೆ ಸಮಾಜ ಪರಸ್ಪರ ನೆರವಾಗುತ್ತಾ, ಅದರೊಂದಿಗೆ ಸರ್ಕಾರ ಆತ್ಮಹತ್ಯೆ ತಡೆಗಟ್ಟುವ ಕಾರ್ಯಕ್ರಮ ಹಾಗೂ ಇದರ ಬಗ್ಗೆ ಸೂಕ್ತ ಕ್ರಮಗಳನ್ನು ಹಮ್ಮಿಕೊಳ್ಳಬೇಕು, ನಿರುದ್ಯೋಗ ಸಮಸ್ಯೆಗೆ ಪರಿಹಾರ ಸೂಚಿಸಬೇಕು ಮತ್ತು ಎಲ್ಲರಿಗೂ ಮನೋವೈದ್ಯಕೀಯ ನೆರವು ದೊರಕುವಂತೆ ಮಾಡಬೇಕಾಗಿದೆ.

ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ‘ವಾಲ್ ಆಫ್ ಹೋಪ್’ ಎಂಬ ಭಿತ್ತಿಪತ್ರ ರಚನೆ, ಆರ್ಟ್ ಥೆರಪಿ ಕಾರ್ಯಾಗಾರ ಹಾಗೂ ‘ಆತ್ನಹತ್ಯೆ ಏನು, ಯಾಕೆ’ ಎಂಬ ರೂಪಕವನ್ನು ಪ್ರಸ್ತುತಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post