ಮೊಘಲ್ ದೊರೆ ಬೀರ್ ಬಲ್ ನ ಹೆಸರನ್ನು ಹೊಂದಿರುವ ಚಿತ್ರದ ಫಸ್ಟ್ ಲುಕ್ ಯೂಟ್ಯೂಬ್‍ನಲ್ಲಿ ಸಖತ್ ಹವಾ ಸೃಷ್ಠಿಸಿದೆ.
ಇದೇ 26ರಂದು ತೆರೆಗೆ ಬರಲು ಸಿದ್ದವಾಗಿರುವ ಬೀರ್ ಬಲ್‍ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಶುಭ ಹಾರೈಸಿದ್ದು, ಚಿತ್ರತಂಡದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೀಡಿಯೋ ನೋಡಿ:
ಎಂ.ಜಿ. ಶ್ರೀನಿವಾಸ್ ನಿರ್ದೇಶನದಲ್ಲಿ ಸಿದ್ದವಾಗಿರುವ ಈ ಟ್ರಯಾಲಜಿ ಥ್ರಿಲ್ಲರ್ ಚಿತ್ರ ತೀವ್ರ ಕುತೂಹಲ ಮೂಡಿಸಿದೆ.
ಇನ್ನು ಚಮಕ್ ಹಾಗೂ ಅಯೋಗ್ಯ ಚಿತ್ರಗಳನ್ನು ನಿರ್ಮಿಸಿದ್ದ ಟಿ.ಆರ್. ಚಂದ್ರಶೇಖರ್ ಅವರೇ ಈ ಚಿತ್ರವನ್ನೂ ಸಹ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ.
ಟೋಪಿವಾಲ, ಶ್ರೀನಿವಾಸ ಕಲ್ಯಾಣ ಚಿತ್ರಗಳ ಯಶಸ್ಸಿನ ನಂತರ ಆರ್.ಜೆ. ಶ್ರೀನಿ ಅವರ ಮೂರನೆಯ ಪ್ರಯತ್ನ ಈ ಬೀರ್‍ಬಲ್. ಚಿತ್ರದ ನಾಯಕಿಯಾಗಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದಾರೆ.
ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಉತ್ತಮ ಪ್ರತಿಕ್ರಿಯೆ ಪಡೆದಿವೆ. ಅದರಲ್ಲೂ ರಾಗಿಣಿ ಹೆಸರಿನಲ್ಲಿ ಶುರುವಾಗುವ ಹಾಡಿಗೆ ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯ ವ್ಯಕ್ತವಾಗಿದೆ.
Discussion about this post